ಬೆಂಗಳೂರು: 2023 ರ ವಿಧಾನಸಭಾ ಚುನಾವಣೆ (Karnataka Election)ಪ್ರಯುಕ್ತ ಎರಡು ದಿನ ಮದ್ಯ ನಿಷೇಧ ಹಿನ್ನೆಲೆ ಸರ್ಕಾರದ ಬೊಕ್ಕಸಕ್ಕೆ ಸುಮಾರು 150 ಕೋಟಿಗೂ ಅಧಿಕ ನಷ್ಟವಾಗಿದೆ. ಚುನಾವಣೆ ಹಿನ್ನೆಲೆ ಎರಡು ದಿನ ಬೆಂಗಳೂರು ಸೇರಿ ರಾಜ್ಯಾದ್ಯಂತ ಬಾರ್ ಹಾಗೂ ವೈನ್ ಶಾಪ್ ಕ್ಲೋಸ್ ಆಗಿತ್ತು. ಪ್ರತಿ ದಿನ 12,500 ಮದ್ಯದ ಅಂಗಡಿಗಳಿಂದ ₹80 ರಿಂದ ₹90 ಕೋಟಿ ರೂ. ಆದಾಯವಾಗುತ್ತಿತ್ತು. ಎರಡು ದಿನ ಅಂಗಡಿ ಬಂದ್ ಮಾಡಿದ್ದರಿಂದ ಕೇವಲ ಸರ್ಕಾರಕ್ಕೆ ಮಾತ್ರವಲ್ಲದೇ ಬಾರ್ ಮಾಲೀಕರಿಗೂ ನಷ್ಟ ಆಗಿದೆ.
ಒಂದು ಬಾರ್ಗೆ ದಿನಕ್ಕೆ ₹1.5 ಲಕ್ಷಕ್ಕೂ ಅಧಿಕ ಆದಾಯ ಬರುತ್ತೆ. ಒಂದು ಎಂಆರ್ಪಿ ಶಾಪ್ಗೆ 3 ಲಕ್ಷ ಆದಾಯ ಬರುತ್ತೆ. ಎರಡು ದಿನದಲ್ಲಿ 12,500 ಮಧ್ಯದಂಗಡಿಗಳಿಂದ ಒಟ್ಟು 200 ಕೋಟಿಗೂ ಅಧಿಕ ಬಿಸಿನೆಸ್ ಆಗುತ್ತಿತ್ತು. ಆದರೆ ಎರಡು ದಿನ ಬಂದ್ ಆಗಿ ಒಟ್ಟು 350 ಕೋಟಿ ರೂಪಾಯಿ ಬಿಸನೆಸ್ ಲಾಸ್ ಆಗಿದೆ. ಮೇ 13ರಂದು ಮತ ಎಣಿಕೆ ಹಿನ್ನೆಲೆ ಇಂದು ರಾತ್ರಿಯಿಂದ ಮತ್ತೆ ಒಂದು ದಿನ ಮದ್ಯದಂಗಡಿ ಬಂದ್ ಆಗಲಿದ್ದು, ಮತ್ತೆ ಮದ್ಯದಂಗಡಿಗಳು ನಷ್ಟ ಅನುಭವಿಸಲಿವೆ.