1918ರಲ್ಲಿ ಮುಳುಗಿದ ಹಡಗೊಂದರಲ್ಲಿ ಸಿಕ್ಕಿದೆ ಭಾರತದ 10 ರೂ. ಮೌಲ್ಯದ ಎರಡು ನೋಟುಗಳನ್ನು ಲಂಡನ್ ನ ಹರಾಜು ಸಂಸ್ಥೆಯೊಂದು ಸದ್ಯದಲ್ಲೇ ಹರಾಜು ಹಾಕುತ್ತಿದೆ.
ಮೇ 29ರಂದು ನಡೆಯುವ ನೂನನ್ಸ್ ಮೇಫೇರ್ ಹರಾಜಿನಲ್ಲಿ ವಿಶ್ವದ ವಿವಿಧ ಬ್ಯಾಂಕ್ ನೋಟುಗಳ ಹರಾಜು ನಡೆಯಲಿದ್ದು, ಭಾರತದ ಎರಡು 10 ರೂ.ನೋಟುಗಳಿಗೆ 2,000(2.11 ಲಕ್ಷ ರೂ.)ಗಳಿಂದ 2,600 ಗ್ರೇಟ್ ಬ್ರಿಟನ್ ಪೌಂಡ್(2.75 ಲಕ್ಷ ರೂ.) ಗಳು ದೊರೆಯುವ ನಿರೀಕ್ಷೆ ಇದೆ.
1918ರಲ್ಲಿ ಬಾಂಬೆಯಿಂದ ಲಂಡನ್ಗೆ ತೆರಳುತ್ತಿದ್ದ ಹಡಗು, ಜರ್ಮನ್ ಯು ಬೋಟ್ನಿಂದ ಮುಳುಗಡೆಯಾಗಿತ್ತು. 5, 10ರೂ. ಮುಖಬೆಲೆಯ ಬಹಳಷ್ಟು ನೋಟುಗಳು ನೀರು ಪಾಲಾಗಿ, ಕೆಲವು ನೋಟುಗಳು ಮಾತ್ರ ಹಾಗೇ ಉಳಿದುಕೊಂಡಿದ್ದವು. ಈ 10 ರೂ. ನೋಟುಗಳ ಜತೆಗೆ ಬ್ರಿಟಿಷ್ ಆಳ್ವಿಕೆ ಕಾಲದ 100 ಹಾಗೂ 5 ರೂ. ನೋಟುಗಳನ್ನೂ ಹರಾಜು ಹಾಕಲಾಗುತ್ತಿದೆ.