200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ನಿಂದಾಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜಾಕ್ವೆಲಿನ್ ನಿರಂತರವಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಜೈಲಿನಲ್ಲಿದ್ದುಕೊಂಡೇ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ಗೆ ಹೋಳಿ ಸಂದರ್ಭದಲ್ಲಿ ಲವ್ ಲೆಟರ್ ಬರೆದಿದ್ದಾನೆ.
‘ಒಳ್ಳೆಯ ವ್ಯಕ್ತಿ, ನನ್ನ ಬ್ಯೂಟಿಫುಲ್ ಜಾಕ್ವೆಲಿನ್ಗೆ ಹೋಳಿ ಶುಭಾಶಯ. ಈ ದಿನ ಬಣ್ಣಗಳ ಹಬ್ಬ. ಮರೆಯಾದ ಬಣ್ಣಗಳು 100 ಪಟ್ಟು ಹೆಚ್ಚಾಗಿ ನಿಮ್ಮ ಬಳಿ ಬರುತ್ತವೆ. ಈ ವರ್ಷ ನಿಮ್ಮ ಬದುಕು ಪ್ರಕಾಶಮಾನವಾಗುತ್ತದೆ. ಆ ರೀತಿ ಆಗುವಂತೆ ಮಾಡೋದು ನನ್ನ ಜವಾಬ್ದಾರಿ’ ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾನೆ.
‘ಐ ಲವ್ ಯೂ ಮೈ ಬೇಬಿ ಗರ್ಲ್. ಯಾವಾಗಲೂ ನಗುತ್ತಾ ಇರು. ಲವ್ ಯು ಮೈ ಪ್ರಿನ್ಸೆಸ್. ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಬೊಮ್ಮ ನೀನು, ನನ್ನ ಪ್ರೀತಿ’ ಎಂದು ಪತ್ರದಲ್ಲಿ ಸುಕೇಶ್ ಬರೆದುಕೊಂಡಿದ್ದಾನೆ.
ಜಾಕ್ವೆಲಿನ್ ಹಾಗೂ ಸುಕೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಸುಕೇಶ್ ಲೀಕ್ ಮಾಡಿದ್ದ. ಇದರಿಂದ ಜಾಕ್ವೆಲಿನ್ಗೆ ಮುಜುಗರ ಆಗಿತ್ತು. ಈ ಫೋಟೋದಿಂದ ನಟಿಗೆ ಸಂಕಷ್ಟಕೂಡ ಹೆಚ್ಚಿತ್ತು. ಅವರು ವಿವಿಧ ರೀತಿಯಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಸುಕೇಶ್ನಿಂದ ಹಲವು ದುಬಾರಿ ಗಿಫ್ಟ್ ಪಡೆದಿರುವುದರಿಂದ ಜಾಕ್ವೆಲಿನ್ ಅವರು ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿದ್ದಾರೆ.