ಕೌಲಾಲಂಪುರ: ಐಷಾರಾಮಿಗಳಲ್ಲಿ ಹುಟ್ಟುವುದು ಒಂದು ಆಯ್ಕೆಯಲ್ಲ ಆದರೆ ಜನರು ಸಮಯದೊಂದಿಗೆ ಅದನ್ನು ಬಳಸಿಕೊಳ್ಳುತ್ತಾರೆ. ಖಾಸಗಿ ಜೆಟ್ನಂತಹ ಸವಲತ್ತುಗಳು, ಮೂರು ಖಂಡಗಳಲ್ಲಿ ಮನೆಗಳು, ಗಡಿಯಾರದ ಸೆಕ್ಯೂರಿಟಿ ಗಾರ್ಡ್ಗಳು ಈ ಅತಿರಂಜಿತತೆಗಳೊಂದಿಗೆ ಬೆಳೆಯಲು ಸಾಕಷ್ಟು ಅದೃಷ್ಟಶಾಲಿಯಾದ ಅಂತಹ ಉತ್ತರಾಧಿಕಾರಿಯೊಬ್ಬರು ಪ್ರೀತಿಗಾಗಿ ಎಲ್ಲವನ್ನೂ ತೊರೆದರು. ಹೌದು ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡಂತೆ ಹುಟ್ಟಿ ಬೆಳೆದ ಯುವತಿಯೊಬ್ಬಳು ತೀರಾ ಸಾಮಾನ್ಯ ಯುವಕನ ಜತೆ ಪ್ರೀತಿಯಲ್ಲಿ ಬಿದ್ದಿದ್ದಳು.
ತಮ್ಮ ಅಂತಸ್ತೇನು, ಆತನ ಅಂತಸ್ತೇನು? ನಿನ್ನನ್ನು ಸಾಕಲು ಆತನಿಗೆ ಸಾಧ್ಯವೇ? ಊಟ ಹಾಕುವ ಗತಿಯೂ ಆತನಿಗೆ ಇಲ್ಲ ಎಂದು ಯುವತಿಯ ಪೋಷಕರು ಅವರಿಬ್ಬರ ಮದುವೆತೆ ಸುತಾರಾಂ ಒಪ್ಪಲಿಲ್ಲ. ಅಂತಸ್ತು ಗಿಂತಸ್ತು ಪ್ರೀತಿ ಮುಂದೆ ಏನೂ ಅಲ್ಲ ಎಂದು ಯುವತಿಯೂ ಪಟ್ಟು ಹಿಡಿದಳು. ಎಂಥದ್ದೇ ಪ್ರೀತಿಯಾದರೂ ದುಡ್ಡಿನ ವಿಚಾರ ಬಂದಾಗ ಆಕೆಯ ಹುಚ್ಚಾಟವೆಲ್ಲ ಇಳಿದು ವಾಸ್ತವಕ್ಕೆ ಬರುತ್ತಾಳೆ ಎಂಬ ಆಲೋಚನೆ ಮನೆಯವರಲ್ಲಿ ಉಂಟಾಯಿತು. ನಿನಗೆ ಅವನು ಬೇಕೋ ಅಥವಾ ಸಾವಿರಾರು ಕೋಟಿ ರೂ ಮೌಲ್ಯದ ಪೂರ್ವಜರ ಆಸ್ತಿ ಬೇಕೋ, ಎರಡರಲ್ಲಿ ಒಂದನ್ನು ಆಯ್ದುಕೋ ಎಂಬ ಆಯ್ಕೆ ಮುಂದಿಟ್ಟರು.
ಎರಡರಲ್ಲಿ ಆಕೆ ಆಸ್ತಿ ಬಿಟ್ಟು ಆ ಸಾಮಾನ್ಯನನ್ನು ಆರಿಸಿಕೊಳ್ಳಲು ಸಾಧ್ಯವೇ ಎಂಬುದು ಅವರ ಲೆಕ್ಕಾಚಾರ. ಆದರೆ ನಿಮ್ಮ ಆಸ್ತಿ ಯಾರಿಗೆ ಬೇಕು? ನನಗೆ ಆ ಹುಡುಗನೇ ಸಾಕು ಎಂದಳು. ಮಲೇಷ್ಯಾದ ಆಗರ್ಭ ಶ್ರೀಮಂತ ಉದ್ಯಮಿಯ ಮಗಳು ತನ್ನ ಪ್ರಿಯಕರನಿಗಾಗಿ ಎಲ್ಲವನ್ನೂ ತೊರೆದು ಮನೆ ಬಿಟ್ಟು ಗೆಳೆಯನ ಜತೆ ಹೊರಟಳು. ಐಷಾರಾಮಿ ಜೀವನ ಬೇಕಿಲ್ಲ, ಸಾಮಾನ್ಯ ಬದುಕನ್ನೂ ಜೀವಿಸಬಲ್ಲೆ ಎಂದು ದಿಟ್ಟವಾಗಿ ಹೇಳಲು ಮುಂದಾದಳು.
ಮಲೇಷ್ಯಾದ ಖ್ಯಾತ ಉದ್ಯಮಿ ಖೂ ಕೇ ಪೆಂಗ್ ಮತ್ತು ಮಾಜಿ ಮಿಸ್ ಮಲೇಷ್ಯಾ ಪೌಲಿನ್ ಚಾಯ್ ಅವರ ಮಗಳು ಆಂಜೆಲಿನ್ ಫ್ರಾನ್ಸಿಸ್ ಖೂ, ಸಿರಿತನಕ್ಕಿಂತ ಪ್ರೇಮವೇ ಹಿರಿದು ಎಂದು ಸಾಬೀತುಪಡಿಸಲು ಹೊರಟ ಯುವತಿ. ಆಕ್ಸ್ಫರ್ಡ್ ವಿವಿಯಲ್ಲಿ ಓದುವಾಗ ಆಕೆ ಜೆಡಿಡಿಯಾ ಫ್ರಾನ್ಸಿಸ್ ಎಂಬಾತನೊಂದಿಗೆ ಪ್ರೀತಿಯಲ್ಲಿ ಬಿದ್ದಳು. ಅವನನ್ನೇ ಮದುವೆಯಾಗಬೇಕು ಎಂದು ನಿರ್ಧರಿಸಿದಳು. ಮನೆಯಲ್ಲಿಯೂ ಇದನ್ನು ಹೇಳಿಬಿಟ್ಟಳು. ಆದರೆ ಅಪ್ಪ- ಅಮ್ಮ ಅದಕ್ಕೆ ಒಪ್ಪಲಿಲ್ಲ. ಅಂತಸ್ತಿನ ವ್ಯತ್ಯಾಸ ಅದಕ್ಕೆ ಕಾರಣವಾಗಿತ್ತು.
ಮದುವೆ ಬಳಿಕ ಇಬ್ಬರೂ ತಮ್ಮ ಕುಟುಂಬಗಳಿಂದ ದೂರವೇ ಉಳಿದು ವಾಸಿಸತೊಡಗಿದರು. ಆದರೆ ಆಂಜೆಲಿನ್ ತನ್ನ ಪೋಷಕರನ್ನು ಒಮ್ಮೆ ಭೇಟಿ ಮಾಡುವ ಪ್ರಸಂಗ ಎದುರಾಯಿತು. ಅದು ಅವರಿಬ್ಬರೂ ವಿಚ್ಛೇದನ ಪಡೆದ ಸಂದರ್ಭ. ಹೇಳಿಕೆ ನೀಡಲು ನ್ಯಾಯಾಲಯಕ್ಕೆ ತೆರಳಿದ್ದ ಆಂಜೆಲಿನ್, ಕುಟುಂಬಕ್ಕೆ ಮಾಡಿದ ಸೇವೆಗಾಗಿ ತಾಯಿಯನ್ನು ಕೊಂಡಾಡಿದ್ದಳು. ಆದರೆ ತಂದೆಯನ್ನು ಕಟುವಾಗಿ ಟೀಕಿಸಿದ್ದಳು. ತಂದೆಗೆ ಹಣ ಮಾಡುವ ಗುರಿಯ ಹೊರತಾಗಿ ಕುಟುಂಬವನ್ನು ಪ್ರೀತಿಯಿಂದ ನೋಡಿಕೊಳ್ಳುವ ಕರ್ತವ್ಯ ನಿಭಾಯಿಸಿಯೇ ತಿಳಿದಿಲ್ಲ ಎಂದು ದೂಚಿಸಿದ್ದಳು. ತನ್ನ ಪೋಷಕರಿಬ್ಬರೂ ಮತ್ತೆ ಜತೆಗೂಡಬೇಕು, ಒಟ್ಟಿಗೆ ಇರಬೇಕು ಎಂದೂ ಆಶಿಸಿದ್ದಳು.