ಮೋಸಗಾರ ಸಿದ್ದರಾಮಯ್ಯ.. ಹೆಂಗಸರಿಗೆ 2,000 ರೂ. ಕೊಟ್ಟು, ಗಂಡಸರಿಗೆ ಎಣ್ಣೆ ರೇಟು ಜಾಸ್ತಿ ಮಾಡಿದ್ರು. ಗಂಡನಿಂದ ಕಿತ್ತು ಹೆಂಡತಿಗೆ ಕೊಟ್ರು ಎಂದು ಕಾಂಗ್ರೆಸ್ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ನಾಮಪತ್ರ ಸಲ್ಲಿಕೆಗೆ ಮುನ್ನ ನಡೆದ ರೋಡ್ ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಭೀಕರ ಬರಗಾಲ. ಆಮೇಲೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಕ್ಯಾಬಿನೆಟ್ನಲ್ಲಿ ಕೂತ್ರು. ಇಡೀ ರಾಜ್ಯದಲ್ಲೆಲ್ಲಾ ಮಳೆ ಬಂತು. ಕಾಂಗ್ರೆಸ್ ಸರ್ಕಾರ ಬಂದಾಗ ಬರಗಾಲ. ಬಿಜೆಪಿ ಸರ್ಕಾರ ಬಂದಾಗ ಮಳೆ. ಕಾಂಗ್ರೆಸ್ನವರ ದರಿದ್ರ ಕಾಲುಗುಣದಿಂದ ಬರಗಾಲ ಬಂದಿದೆ ಎಂದು ಕುಟುಕಿದರು
ರಾಮಮಂದಿರ ಕಟ್ಟೋಕೆ 100 ವರ್ಷ ಆಯ್ತು. ಯಾರು ಕಟ್ಟೋಕೆ ಆಗಿಲ್ಲ. ಮೋದಿನೇ ಬರಬೇಕಾಯ್ತು. ನಮ್ಮ ಬೆಂಬಲ ಯಾರಿಗೆ? ಮೋದಿಗೆ. ಕಾಂಗ್ರೆಸ್ ಕಾಶ್ಮೀರವನ್ನ ಬಿಟ್ಟುಬಿಟ್ರು. ಆದರೆ, ಮೋದಿ ನಮ್ಮದಾಗಿಸಿಕೊಂಡ್ರು. ರಾಹುಲ್ ಗಾಂಧಿ ಅವರು ಮೋದಿಗೆ ಸರಿಸಮನಾಗಿ ನಿಲ್ಲೋಕೆ ಆಗುತ್ತಾ..? ಯಾವಾಗ ಫಾರಿನ್ಗೆ ಓಡೋಗ್ತಾರೋ ಗೊತ್ತಿಲ್ಲ ಎಂದು ಆರ್. ಅಶೋಕ್ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.