ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಭರ್ಜರಿ ಜಯ ದಾಖಲಿಸಿದ್ದು, ಸೆಮೀಸ್ ಗೆ ಲಗ್ಗೆ ಇರಿಸಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದ ಭಾರತ ತಂಡ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು.
ಮಿಚೆಲ್ ಮಾರ್ಷ್ ನಾಯಕತ್ವದ ಆಸ್ಟ್ರೇಲಿಯಾ ನಾಲ್ಕರ ಘಟ್ಟದ ಹಾದಿಯಿಂದ ಹೊರಬೀಳುವುದು ಬಹುತೇಕ ಖಚಿತವಾಯಿತು. ಕಳೆದ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ಮುಖಭಂಗ ಅನುಭವಿಸಿದ್ದ ಆಸ್ಟ್ರೇಲಿಯಾ ಭಾರತದ ಎದುರೂ ಮಂಡಿಯೂರಿತು. ಮಂಗಳವಾರ ನಡೆಯಲಿರುವ ಬಾಂಗ್ಲಾ-ಅಫ್ಗಾನಿಸ್ತಾನ ಪಂದ್ಯದ ಫಲಿತಾಂಶದ ನಂತರ ಆಸ್ಟ್ರೇಲಿಯಾದ ಭವಿಷ್ಯ ನಿರ್ಧಾರವಾಗಲಿದೆ.
ಏಳು ತಿಂಗಳುಗಳ ಹಿಂದೆ ಅಹಮದಾಬಾದಿನಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಆಸ್ಟ್ರೇಲಿಯಾ ಎದುರು ಸೋತಿದ್ದ ಭಾರತ ಇಲ್ಲಿ ಮುಯ್ಯಿ ತೀರಿಸಿಕೊಂಡಿತು.
ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 24 ರನ್ಗಳಿಂದ ಜಯಿಸಲು ನಾಯಕ ರೋಹಿತ್ ಅವರ ಬ್ಯಾಟಿಂಗ್ ಮತ್ತು ಬೌಲರ್ಗಳ
ಛಲ ಬಿಡದ ಆಟ ಕಾರಣವಾಯಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲಿ ಯಶಸ್ಸು ಲಭಿಸಿತು. ಆಸ್ಟ್ರೇಲಿಯಾ ಪರ ಪರಿಣಾಮಕಾರಿಯಾಗಿದ್ದ ಜೋಶ್ ಹ್ಯಾಜಲ್ವುಡ್ (4-0-14-1) ಅವರು ಕೊಹ್ಲಿ ವಿಕೆಟ್ ಪಡೆದರು. ಟಿಮ್ ಡೇವಿಡ್ ಮಿಡ್ಆನ್ ಕಡೆ ಓಡಿ ಪಡೆದ ಉತ್ತಮ ಕ್ಯಾಚ್ ಇದಕ್ಕೆ ಕಾರಣವಾಯಿತು. ಕೊಹ್ಲಿ ಬರಿಗೈಯಲ್ಲಿ ಮರಳಿದರು.
ಆದರೆ ಇನ್ನೊಂದೆಡೆ ಇದ್ದ ರೋಹಿತ್ ಬೀಸಾಟ ಮುಗಿಲುಮುಟ್ಟಿತು. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ಮೂರನೇ ಓವರ್ನಲ್ಲಿ ಶರ್ಮಾ 28 ರನ್ ಬಾಚಿದರು. ಆ ಓವರ್ನಲ್ಲಿ ನಾಲ್ಕು ಸಿಕ್ಸರ್, ಒಂದು ಬೌಂಡರಿ ಜೊತೆ ಒಂದು ವೈಡ್ ಸೇರಿ 29 ರನ್ಗಳು ಹರಿದುಬಂದವು.
ರೋಹಿತ್ ಕೇವಲ ಎಂಟು ರನ್ಗಳಿಂದ ಶತಕ ತಪ್ಪಿಸಿಕೊಂಡರು. ಆದರೆ ತಂಡ 5 ವಿಕೆಟ್ಗೆ 205 ರನ್ಗಳ ದೊಡ್ಡ ಮೊತ್ತ ಪೇರಿಸಲು ನೆರವಾದರು. ಎದುರಾಳಿ ಬೌಲರ್ಗಳ ಬೆವರಿಳಿಸಿದರು. ಕೇವಲ 41 ಎಸೆತಗಳಲ್ಲಿ ಏಳು ಬೌಂಡರಿ, ಎಂಟು ಸೊಗಸಾದ ಸಿಕ್ಸರ್ಗಳಿದ್ದ 92 ರನ್ ಸಿಡಿಸಿದರು.
ರಿಷಭ್ ಪಂತ್ (15) ಜೊತೆ 87 ರನ್ಗಳ ಎರಡನೇ ಜೊತೆಯಾಟದಲ್ಲಿ ರೋಹಿತ್ ಅವರದೇ ಸಿಂಹಪಾಲು. ಕೊನೆಗೂ ಮಾರ್ಕಸ್ ಸ್ಟೊಯಿನಿಸ್ ಈ ಜೊತೆಯಾಟ ಮುರಿದರು. ಪಂತ್ ಅವರು ಲಾಂಗ್ಆಫ್ನಲ್ಲಿ ಹ್ಯಾಜಲ್ವುಡ್ ಹಿಡಿದ ಕ್ಯಾಚಿಗೆ ನಿರ್ಗಮಿಸಬೇಕಾಯಿತು.
ಶತಕದತ್ತ ಹೆಜ್ಜೆಯಿಟ್ಟಿದ್ದ ರೋಹಿತ್ ಅವರ ವಿಕೆಟ್ ಅನ್ನು ಸ್ಟಾರ್ಕ್ ಅವರೇ ಗಳಿಸಿದರು. ಈ ಪಂದ್ಯದಲ್ಲಿ ರೋಹಿತ್ ಅವರಿಂದ ಅತಿ ಹೆಚ್ಚು ದಂಡಿತರಾಗಿದ್ದ ಸ್ಟಾರ್ಕ್ ನಿಟ್ಟುಸಿರುಬಿಟ್ಟರು.
ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ (31, 16ಎ, 4×2, 2×6), ಶಿವಂ ದುಬೆ (28, 22ಎ) ಮತ್ತು ಹಾರ್ದಿಕ್ ಪಾಂಡ್ಯ (ಔಟಾಗದೇ 27, 17ಎ)