ಆಸ್ಟ್ರೇಲಿಯಾ ವಿರುದ್ಧ ಭಾರತ ಮೋಸದಿಂದ ಗೆದ್ದಿದೆ ಎಂದು ಪಾಕ್ ಮಾಜಿ ನಾಯಕ ಹೀಗೊಂದು ಗಂಭೀರ ಆರೋಪ ಮಾಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದ ವೇಳೆ ನ್ಯೂಸ್ 24 ಚಾನೆಲ್ನ ಚರ್ಚೆಯಲ್ಲಿ ಭಾಗವಹಿಸಿದ್ದ ಇಂಝಮಾಮ್ ಉಲ್ ಹಕ್, ಭಾರತ ತಂಡದ ಗೆಲುವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ತಂಡವು ಉತ್ತಮ ಬೌಲಿಂಗ್ ಮಾಡಲು ಸಾಧ್ಯವಾಗದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಉತ್ತಮ ದಾಳಿ ಸಂಘಟಿಸಿದ್ದರು
ಬಾಲ್ ಟ್ಯಾಂಪರಿಂಗ್ ಮಾಡಿರುವ ಕಾರಣ ಇದು ಸಾಧ್ಯವಾಗಿದೆ ಎಂದು ಇಂಝಮಾಮ್ ಆರೋಪಿಸಿದ್ದಾರೆ. ಅರ್ಷದೀಪ್ ಸಿಂಗ್ ಎಸೆದ 15ನೇ ಓವರ್ನಲ್ಲೇ ಚೆಂಡು ರಿವರ್ಸ್ ಸ್ವಿಂಗ್ ಪಡೆಯುತ್ತಿತ್ತು. 15ನೇ ಓವರ್ನಲ್ಲಿ ಚೆಂಡು ರಿವರ್ಸ್ ಸ್ವಿಂಗ್ ಆಗಬೇಕಿದ್ದರೆ, 12ನೇ 13ನೇ ಓವರ್ ವೇಳೆಯೇ ಚೆಂಡನ್ನು ಇದಕ್ಕಾಗಿ ಸಿದ್ಧಪಡಿಸಬೇಕಾಗಿರುತ್ತದೆ. ಹೀಗೆ ಚೆಂಡನ್ನು ಯಾವುದಾರೂ ರೀತಿಯಲ್ಲಿ ವಿರೂಪಗೊಳಿಸಿದರೆ ಮಾತ್ರ ರಿವರ್ಸ್ ಸ್ವಿಂಗ್ ಆಗುತ್ತದೆ. ಹೀಗಾಗಿ ಭಾರತೀಯ ಬೌಲರ್ಗಳು ಚೆಂಡನ್ನು ಟ್ಯಾಂಪರಿಂಗ್ ಮಾಡಿರುವ ಸಾಧ್ಯತೆಯಿದೆ. ಇದನ್ನೆಲ್ಲಾ ಅಂಪೈರ್ ಕಣ್ಣು ಬಿಟ್ಟು ಗಮನಿಸಬೇಕು ಎಂದು ಇಂಝಮಾಮ್ ಉಲ್ ಹಕ್ ಹೇಳಿದ್ದಾರೆ
ಇಂಝಮಾಮ್ ಉಲ್ ಹಕ್ ಅವರ ಈ ಆರೋಪಕ್ಕೆ ಮಾಜಿ ಕ್ರಿಕೆಟಿಗ ಸಲೀಮ್ ಮಲಿಕ್ ಕೂಡ ಧ್ವನಿಗೂಡಿಸಿದ್ದಾರೆ. ಕೆಲವು ಉನ್ನತ ತಂಡಗಳ ವಿಷಯಕ್ಕೆ ಬಂದಾಗ ಅಧಿಕಾರಿಗಳು ಕಣ್ಣು ಮುಚ್ಚಿರುತ್ತಾರೆ. ಅಂತಹ ತಂಡಗಳಲ್ಲಿ ಭಾರತ ಕೂಡ ಒಂದು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಬೌಲರ್ಗಳು ಬಾಲ್ ಟ್ಯಾಂಪರಿಂಗ್ ಮಾಡಿರುವ ಸಾಧ್ಯತೆಯಿದೆ ಎಂದು ಮಲಿಕ್ ಕೂಡ ಆರೋಪಿಸಿದ್ದಾರೆ.
ಇದೀಗ ಇಂಝಮಾಮ್ ಉಲ್ ಹಾಗೂ ಸಲೀಮ್ ಮಲಿಕ್ ಅವರ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಪರ ವಿರೋಧ ಚರ್ಚೆಗಳು ಶುರುವಾಗಿದೆ