ಪ್ರಯಾಣ ಅಥವಾ ಪ್ರವಾಸವು ಸಂತಸ, ಸಂಭ್ರಮ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಆರೋಗ್ಯವನ್ನೂ ನೀಡುತ್ತದೆ. ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸ ಒತ್ತಡವನ್ನು ನಿವಾರಿಸುವ ಮೂಲಕ ಹೊಸತವನ್ನು ನೀಡುತ್ತದೆ. ಹೀಗಾಗಿ ಒತ್ತಡದ ಜೀವನಶೈಲಿಯಿಂದ ಹೊರಬರಲು ಅನೇಕರು ಆಗಾಗ ಪ್ರವಾಸಕ್ಕೆ ತೆರಳುತ್ತಾರೆ.
ವಿಶ್ವಸಂಸ್ಥೆಯ ವಿಶ್ವ ವ್ಯಾಪಾರ ಸಂಸ್ಥೆ ಆರಂಭಿಸಿದ ಈ ದಿನದ ಮಹತ್ವ, ಉದ್ದೇಶ, ಥೀಮ್ ವಿವರಣೆ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.
ವಿಶ್ವಪ್ರವಾಸೋದ್ಯಮದಿನದಇತಿಹಾಸ
ವಿಶ್ವಸಂಸ್ಥೆಯ ವರ್ಲ್ಡ್ ಟೂರಿಸಂ ಆರ್ಗನೈಜೇಷನ್(ಯುಎನ್ಡಬ್ಲ್ಯುಟಿಒ) 1970 ಸೆಪ್ಟೆಂಬರ್ 27ರಂದು ಮೊದಲ ಬಾರಿಗೆ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲು ಶಾಸನಗಳನ್ನು ರಚಿಸಿತು. ಯುಎನ್ಡಬ್ಲ್ಯುಟಿಒ 1980 ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲು ಅಂಗೀಕರಿಸಿತು. ಪ್ರವಾಸೋದ್ಯಮವನ್ನು ಜಾಗತಿಕವಾಗಿ ಪ್ರಚಾರಗೊಳಿಸುವ ಉದ್ದೇಶದಿಂದ ಈ ದಿನವನ್ನು ಆರಂಭಿಸಲಾಗಿದೆ. ಅಂದಿನಿಂದ ಪ್ರತಿ ವರ್ಷ ಆ ದಿನದಂದು ಪ್ರವಾಸೋದ್ಯಮ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜನವರಿ ಹದಿನೈದು ಭಾರತದ ರಾಷ್ಟ್ರೀಯ ಪ್ರವಾಸೋದ್ಯಮ ದಿನವಾಗಿದೆ.
ವಿಶ್ವಪ್ರವಾಸೋದ್ಯಮದಿನದಮಹತ್ವ
ವಿಶ್ವ ಪ್ರವಾಸೋದ್ಯಮ ದಿನದ ಉದ್ದೇಶ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಕೊರೊನಾ ಕಾರಣ 90% ವಿಶ್ವ ಪರಂಪರೆಯ ತಾಣಗಳನ್ನು ಮುಚ್ಚಲಾಯಿತು. ಇದರಿಂದಾಗಿ ಹಲವಾರು ಜನ ನಿರುದ್ಯೋಗಿಗಳಾದರು. ಹೆಚ್ಚುವರಿ 32 ಮಿಲಿಯನ್ ಜನರು ತೀವ್ರ ಬಡತನಕ್ಕೆ ತಳ್ಳಲ್ಪಟ್ಟರು. ಗ್ರಾಮೀಣ ಸಮುದಾಯಗಳಲ್ಲಿನ ಯುವಕರು ನಿರುದ್ಯೋಗಿಗಳಾಗಿರುವುದರಿಂದ ಪ್ರವಾಸೋದ್ಯಮ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ.
ಭಾರತದಲ್ಲಿಪ್ರವಾಸೋದ್ಯಮದಮಹತ್ವ
ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಇಲ್ಲಿನ ಪ್ರತಿರಾಜ್ಯದಲ್ಲಿಯೂ ಪ್ರವಾಸಿ ತಾಣಗಳು ಸಾಕಷ್ಟಿವೆ. ಇವುಗಳನ್ನು ಪ್ರವಾಸಿಸ್ನೇಹಿಯಾಗಿ ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಬೇಕಿದೆ. ಕರ್ನಾಟಕದಲ್ಲಿ ಹಲವು ಪ್ರದೇಶಗಳು ಪ್ರವಾಸಿಗರನ್ನು ಸೆಳೆಯಲು ಸೂಕ್ತವಾಗಿದ್ದರೂ ಕೆಲವೇ ಪ್ರದೇಶಗಳಿಗೆ ಮಾತ್ರ ಇದಕ್ಕೆ ಮಹತ್ವ ನೀಡಲಾಗಿದೆ. ಭಾರತದಲ್ಲಿ ಪ್ರವಾಸೋದ್ಯಮವು ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ವಿದೇಶಿ ವಿನಿಮಯದ ಎರಡನೇ ಅತಿದೊಡ್ಡ ಗಳಿಕೆಯಾಗಿದೆ. ಪ್ರವಾಸೋದ್ಯಮ ಕ್ಷೇತ್ರು ಕೌಶಲ ಮತ್ತು ಕೌಶಲರಹಿತವುಳ್ಳ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸಿದೆ.