ಬೆಂಗಳೂರು: ಚಿತ್ರಸಂತೆ ಅಂದ್ರೆ ಕಲಾರಸಿಕರ ಹಣ್ಣಿಗೆ ಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ಕರ್ನಾಟಕ ಚಿತ್ರಕಲಾ ಪರಿಷತ್ ನಿಂದ 21 ನೇ ಚಿತ್ರಸಂತೆ ಆಯೋಜನೆ ಮಾಡಿದೆ.
ಜನವರಿ 7 ನೇ ತಾರೀಖು ಬೆಳಗ್ಗೆ 8 ರಿಂದ ರಾತ್ರಿ 8 ವರಿಗೆ ನಡೆಯಲಿರುವ ಚಿತ್ರಸಂತೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ ಬಳಿ ನಡೆಯಲಿರೋ ಚಿತ್ರಸಂತೆಯಲ್ಲಿ ಈ ಬಾರಿ 22 ರಾಜ್ಯಗಳ 1500 ಕಲಾವಿದರ ಕಲಾಕೃತಿಗಳು ಪ್ರದರ್ಶನವಾಗ್ತಿವೆ. ಸಂತೆಯಲ್ಲಿ 300 ಮಳಿಗೆಗಳು ಸ್ಥಾಪನೆ ಮಾಡಲಿದ್ದು 100 ರೂಪಾಯಿ ಯಿಂದ ಲಕ್ಷದವರೆಗಿನ ಮೌಲ್ಯದ ಕಲಾಕೃತಿಗಳು ಸಿಗಲಿದೆ.
ಈ ಬಾರಿ ಚಿತ್ರಸಂತೆ ಐದರಿಂದ ಆರು ಲಕ್ಷ ಜನ ಬೇಟಿ ನೀಡುವ ಸಾಧ್ಯತೆ ಇದೆ ಅಂತ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್ ತಿಳಿಸಿದ್ರು