ಮಹದೇವಪುರ: ಆವಲಹಳ್ಳಿಯ ಪುರಾತನ ಪ್ರಸಿದ್ದ ಶ್ರೀ ಮುನೇಶ್ವರ ಸ್ವಾಮಿಯ 223ನೇ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಅಂಗವಾಗಿ ದೇವರನ್ನು ಬಗೆ ಬಗೆಯ ಹೂವಿನಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೇರವಣಿಗೆ ಮಾಡಲಾಯಿತು. ಜಾತ್ರ ಮಹೋತ್ಸವದಲ್ಲಿ ಹಳ್ಳಿಕಾರ್ ಎತ್ತುಗಳಿಂದ ಪ್ರದರ್ಶನ ಮಾಡಲಾಯಿತು.ಆವಲಹಳ್ಳಿ ವಿರೇನಹಳ್ಳಿ ಮಂಡೂರು ಗ್ರಾಮಗಳಿಂದ ದೇವರಿಗೆ ದೀಪೋತ್ಸವ ಮಾಡಲಾಯಿತು.
ಜಾತ್ರಾ ಮಹೊತ್ಸವದಲ್ಲಿ ಡೊಳ್ಳು ಕುಣಿತ ವೀರಗಾಸೆ, ,ಗಾರುಡಿಗೊಂಬೆ ಸೇರಿದಂತೆ ಕಲಾತಂಡಗಳ ನೃತ್ಯವು ನೆರೆದಿದ್ದವರನ್ನು ಆಕರ್ಷಿಸಿತು. ವೀರೆನಹಳ್ಳಿ, ಬಿದರೆಅಗ್ರಹಾರ ,ಚೀಮಸಂದ್ರ ,ಹಿರಂಡಹಳ್ಳಿ ,ಮೇಡಹಳ್ಳಿ, ಮಂಡೂರು ಸೇರಿದಂತೆ ಆವಲಹಳ್ಳಿ ಸುತ್ತಮುತ್ತಲಿನ ಭಕ್ತಾದಿಗಳು ರಥೋತ್ಸ ವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಹೆಣ್ಣುಮಕ್ಕಳು ಹೂಗಳಿಂದ ಅಲಂಕಾರಿಸಿಕೊಂಡ ತಂಬಿಟ್ಟಿನ ದೀಪಗಳನ್ನ ಹೊತ್ತು ಕೊಂಡು ಗ್ರಾಮದ ಎಲ್ಲಾ ಬೀದಿಗಳಲ್ಲಿ ತಮಟೆ ವಾದ್ಯಗಳೊಂದಿಗೆ ಮೆರೆವಣಿಗೆ ಮಾಡಿಕೊಂಡು ಶ್ರೀ ಮುನೇಶ್ವರ ದೇವರಿಗೆ ಅರ್ಪಣೆ ಮಾಡುವುದು ಹಬ್ಬದ ವಿಶೇಷತೆಯಾಗಿದೆ.
ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಪ್ರತಿ ಬೀದಿಗಳಲ್ಲಿ ಪಾನಕ ಮಜ್ಜಿಗೆಯನ್ನ ನೀಡಲಾಯಿತು.ರಥೋತ್ಸವದಲ್ಲಿ ಶಾಸಕ ಅರವಿಂದ ಲಿಂಬಾವಳಿ ಭಾಗವಹಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.ತೇರಿಗೆ ಬಾಳೆಹಣ್ಣು ಎಸೆದು ದೇವರ ಕೃಪೆಗೆ ಪಾತ್ರರಾದರು.ಬಿಜೆಪಿ ಅಭಿಮಾನಿಗಳು ಚುನಾವಣೆಯಲ್ಲಿ ಮಂಜುಳಾ ಅರವಿಂದ ಲಿಂಬಾವಳಿಯವರು ಗೆಲುವು ಸಾಧಿಸಬೇಕು ಎಂದು ಬಾಳೆಹಣ್ಣುಗಳ ಮೇಲೆ ಬರೆದು ತೇರಿನ ಮೇಲೆ ಎಸೆದರು. ಈ ಸಂದರ್ಭದಲ್ಲಿ ಅವಲಹಳ್ಳಿ ಗ್ರಾ. ಪಂ ಅದ್ಯಕ್ಷೆ ಪ್ರಭಾವತಿ ವೆಂಕಟೇಶ್, ಗ್ರಾ.ಪಂ ಸದಸ್ಯ ಕಿಶೋರ್, ಕೃಷ್ಣಪ್ಪ, ರಘು ಗ್ರಾಮ ಹಿರಿಯ ಮುಖಂಡ ವಾಸುದೇವ ನಟರಾಜ್, ಗಣೇಶ್, ಕೆಂಪೇಗೌಡ ಮತ್ತಿತರರು ಹಾಜರಿದ್ದರು.