ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಶೇ.81.15 ಫಲಿತಾಂಶ ಬಂದಿದೆ. ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡ ದಕ್ಷಿಣ ಕನ್ನಡ -ಶೇ.97.37 ಫಲಿತಾಂಶ ಬಂದರೆ, ದ್ವಿತೀಯ ಸ್ಥಾನದಲ್ಲಿ ಗುರುತಿಸಿಕೊಂಡ ಉಡುಪಿಗೆ ಶೇ.96.80 ಫಲಿತಾಂಶ ಬಂದಿದೆ. ತೃತೀಯ ಸ್ಥಾನದಲ್ಲಿ ಗುರುತಿಸಿಕೊಂಡ ವಿಜಯಪುರ ಶೇ.94.89ರಷ್ಟು ಫಲಿತಾಂಶ ಬಂದಿದೆ.
ಆರ್ಟ್ಸ್ ವಿಭಾಗ
ಮೇಧಾ- 596 NMKRV ಕಾಲೇಜು ಜಯನಗರ (ಪ್ರಥಮ)
ವೇದಾಂತ್ – 596- SS ಪಿಯು ಕಾಲೇಜು- ವಿಜಯಪುರ
ಕವಿತಾ ಬಿ.ವಿ.- 596- ಇಂದು ಪಿಯು ಕಾಲೇಜು- ಬಳ್ಳಾರಿ
ರವೀನಾ ಸೋಮಪ್ಪ ಲಮಾಣಿ- 595- ಕೆಇಬಿ ಪಿಯು ಕಾಲೇಜು- ಧಾರವಾಡ- ದ್ವಿತೀಯ
ವಾಣಿಜ್ಯ ವಿಭಾಗ
ಗಾನವಿ- 597- ವಿದ್ಯಾನಿಧಿ ಕಾಲೇಜು, ಕುವೆಂಪುನಗರ, ತುಮಕೂರು
ವಿಜ್ಞಾನ ವಿಭಾಗ
ನೂತನ್ ಆರ್ ಗೌಡ- 595- ಆಳ್ವಾಸ್ ಪಿಯು ಕಾಲೇಜು- ಮೂಡುಬಿದಿರೆ
ಸಮ್ಯಕ್ ಆರ್ ಪ್ರಭು- 595- ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ
ಅಮೋದ್ ನಾಯ್ಕ್- 595- ಅಶೋಕ್ ಪಿಯು ಕಾಲೇಜು- ಜಾಲಹಳ್ಳಿ – ಬೆಂಗಳೂರು
ಪವನ್- 596- ಕುಮದ್ವತಿ ಪಿಯು ಕಾಲೇಜು- ಶಿವಮೊಗ್ಗ
ಹರ್ಷಿತ್- 596- ಉಡುಪಿ- ಪೂರ್ಣ ಪ್ರಜ್ಞಾ ಕಾಲೇಜು