ಧಾರವಾಡ: ಒಡಿಸಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ರೈಲು ದುರಂತ ಹಿನ್ನೆಲೆಯಲ್ಲಿ, ಹುಬ್ಬಳ್ಳಿ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಒನೆ ಹಾಗೂ ಸುದ್ದಿಗೋಷ್ಠಿಯನ್ನು ರದ್ದು ಮಾಡಿದ್ದಾರೆ.
ಕೇಂದ್ರ ಸರ್ಕಾರದ 9 ವರ್ಷಗಳ ಆಡಳಿತ ಅವಧಿಯ ಸಾಧನೆ ಕುರಿತು ಹುಬ್ಬಳ್ಳಿಯ ಚಿಟಗುಪ್ಪಿ ಆವರಣದ ಎಂ ಪಿ ಕಚೇರಿಯಲ್ಲಿ ಇಂದು 12 ಗಂಟೆಗೆ ಸುದ್ದಿಗೋಷ್ಠಿ ನಿಗದಿಯಾಗಿತ್ತು. ಜೊತೆಗೆ ಸಂಜೆ 5 ಗಂಟೆಗೆ ಧಾರವಾಡದ ಗಣೇಶನಗರ ಮತ್ತು ಶ್ರೀನಗರ ಕೆಯುಡಿ ಸರ್ಕಲ್ ಹತ್ತಿರದ ಲೆವೆಲ್ ಕ್ರಾಸಿಂಗ್ ನಂ: 300 ಹಾಗೂ 299 ಗಳ ರಸ್ತೆ ಕೆಳ ಸೇತುವೆಗಳ ಶಂಕುಸ್ಥಾಪನೆ ಹಾಗೂ ಕಲ್ಯಾಣನಗರದ ಲೆವೆಲ್ ಕ್ರಾಸಿಂಗ್ ಗೇಟ್ ನಂ 297ಕ್ಕೆ ನಿರ್ಮಿಸಲಾದ ರಸ್ತೆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮವನ್ನು ಈಗ ರದ್ದು ಮಾಡಲಾಗಿದೆ.
ಒಡಿಶಾ ರೈಲು ದುರಂತದಲ್ಲಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಹುಬ್ಬಳ್ಳಿ ಧಾರವಾಡದಲ್ಲಿ ಕೇಂದ್ರ ಸಚಿವರು ಪ್ರಹ್ಲಾದ್ ಜೋಶಿಯವರು ಹಮ್ಮಿಕೊಂಡಿದ್ದ ಎಲ್ಲ ಕಾರ್ಯಕ್ರಮಗಳು ರದ್ದು ಮಾಡಿರುವುದಾಗಿ ಆಪ್ತ ಕಾರ್ಯದರ್ಶಗಳು ಮಾಹಿತಿ ನೀಡಿದ್ದಾರೆ.