ಬೆಂಗಳೂರು: ಕರ್ನಾಟಕ 2023 ರ ವಿಧಾನಸಭೆ ಚುನಾವಣೆ ಹಿನ್ನಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸ್ ಚೆಕ್ಪೋಸ್ಟ್ ನಿರ್ಮಿಸುವ ಮೂಲಕ ಬೀಗಿ ಬಂದೋಬಸ್ತ್ ಮಾಡಲಾಗಿದೆ. ಅದರಂತೆ ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬೆಳ್ಳಿ, ಹಣವನ್ನ ಜಪ್ತಿ ಮಾಡಲಾಗಿದ್ದು, ಇದೀಗ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲೆಕ್ಕವಿಲ್ಲದ 30 ಲಕ್ಷ ಹಣ ಪತ್ತೆಯಾಗಿದೆ.
ಲಾಲ್ ಭಾಗ್ ದಕ್ಷಿಣ ಗೇಟ್ ಬಳಿ ಹಣ ಪತ್ತೆ ಆಗಿದ್ದು, ಅನಧಿಕೃತವಾಗಿ ಯಾವುದೇ ದಾಖಲಾತಿಗಳಿಲ್ಲದೆ ಹಣ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಇಬ್ಬರನ್ನು ಅರೆಸ್ಟ್ ಮಾಡಲಾಗಿದ್ದು, ಕುಂದನ್ ಗುಜರ್, ರತನ್ ಗುಪ್ತಾ ಬಂಧಿತರು ಎಂದು ಗುರುತಿಸಲಾಗಿದೆ. ಇನ್ನೂ ಬಂಧಿತರಿಂದ 30 ಲಕ್ಷ ಹಣ ವಶಕ್ಕೆ ಪಡೆದ ಸಿದ್ದಾಪುರ ಪೊಲೀಸರು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.