ದಕ್ಷಿಣ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ಇದೀಗ ರಣಭೀಕರ ಪ್ರವಾಹ ಮತ್ತು ಭೂಕುಸಿತ ತಡೆಯಲು ವಿಫಲರಾದ ಸುಮಾರು 30 ಅಧಿಕಾರಿಗಳನ್ನು ಗಲ್ಲಿಗೇರಿಸ ಕಿಮ್ ಜಾಂಗ್ ಉನ್ ಆದೇಶ ಹೊರಡಿಸಿದ್ದಾರೆ.
ಉತ್ತರ ಕೊರಿಯಾದ ಸುರಿದ ಭಾರೀ ಮಳೆ ಪ್ರವಾಹದಲ್ಲಿ ಸುಮಾರು 4000 ಜನರು ಸಾವನ್ನಪ್ಪಿದ್ದರು. ಉತ್ತರ ಕೊರಿಯಾದ ಚೋಸನ್ ಟಿವಿ ವರದಿ ಪ್ರಕಾರ, ಇತ್ತೀಚೆಗಿನ ಪ್ರವಾಹದಲ್ಲಿ ಜನರು ಜೀವಕಳೆದುಕೊಂಡಿರುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ನಷ್ಟವಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಕಠಿನ ಶಿಕ್ಷೆ ನೀಡುವುದಾಗಿ ಕಿಮ್ ಜಾಂಗ್ ಘೋಷಿಸಿರುವುದಾಗಿ ತಿಳಿಸಿದೆ.
ಪ್ರವಾಹ, ಭೂಕುಸಿತ ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಬೇಜವಾಬ್ದಾರಿ ಹೊಣೆಗಾರಿಕೆ ಮತ್ತು ಭ್ರಷ್ಟಾಚಾರದ ಆರೋಪ ಹೊರಿಸಿದ್ದು, ಕಳೆದ ತಿಂಗಳಾಂತ್ಯದಲ್ಲಿ 30 ಅಧಿಕಾರಿಗಳನ್ನು ಗಲ್ಲಿಗೇರಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.