ಹಸಿರೇ ಉಸಿರು ಅಂತಾ ಭಾಷಣ ಬಿಗಿಯೋರೇ ಹೆಚ್ಚು. ಅದ್ರಲ್ಲೂ ಪರಿಸರ ದಿನಾಚರಣೆ ಬಂದ್ರೆ ಒಂದೇ ಒಂದು ಗಿಡ ನೆಟ್ಟು ಪೋಸ್ ಕೊಡೋರಿಗೇನೂ ಕಮ್ಮಿಯಿಲ್ಲ, ವಾಟ್ಸಾಪ್,ಫೇಸ್ಬುಕ್,ಯುಟ್ಯೂಬ್ ಸೇರಿ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಪ್ರಕೃತಿ ಪ್ರೇಮ ಮೆರೆಯೋರಂತೂ ಕೊಂಚ ಜಾಸ್ತಿನೇ ಇದ್ದಾರೆ. ಇಂತವರ ಮಧ್ಯೆ ಅಲ್ಲೊಂದು ಕಾಲೋನಿಯ ಜನ್ರು ವರ್ಷಪೂರ್ತಿ ಪರಿಸರ ದಿನಾಚರಣೆ ಮಾಡ್ತಾರೆ. ಪ್ರತಿದಿನವೂ ಪ್ರಕೃತಿ ಮಾತೆಯನ್ನ ಪೂಜಿಸುವ ಆ ಜನ್ರು ಇರೋದಾದ್ರು ಎಲ್ಲಿ? ಆ ಕುರಿತು ಸ್ಟೋರಿ ನೋಡೋಣ ಬನ್ನಿ…
ಇಲ್ಲಿನ ಜನ್ರಿಂದ ಪರಿಸರಕ್ಕೆ ದೇವರ ಮನ್ನಣೆ
ಹೌದು ಪರಿಸರ ದಿನಾಚರಣೆ ಬಂದ್ರೆ ಸಾಕು ಜನ್ರು ವರ್ಷಕ್ಕೊಮ್ಮೆ ಮಾತ್ರ ಗಿಡ ನೆಡ ನೆಟ್ಟು ಕೈ ಬಿಡೋದೇ ನಮ್ಮ ಕಾಯಕ ಅಂದುಕೊಳ್ಳುವವರೇ ಹೆಚ್ಚಾಗಿದ್ದಾರೆ. ಯಾವುದಾದರೊಂದು ಸಸಿ ತಂದು ಮನೆಯಲ್ಲಿ ಕುಟುಂಬಸ್ಥರು, ಕಚೇರಿಯಲ್ಲಿ ಸಹೋದ್ಯೋಗಿಗಳೆಲ್ಲ ಸೇರಿ ಸಸಿಗೆ ನೀರೆರೆದು ಪರಿಸರ ದಿನಾಚರಣೆ ಮಾಡಿದ್ವಿ ಅಂತಾ ಫೇಸ್ಬುಕ್,ಯುಟ್ಯೂಬ್ ,ಇನಸ್ಟಾ, ಸೇರಿ ಸೋಶಿಯಲ್ ಮಿಡಿಯಾಗಳಲ್ಲಿ ರೀಲ್ಸ್ ಗಳ ಹಾವಳಿಯೇ ಶುರುವಾಗಿರತ್ತೆ.
ಆದ್ರೆ ಇದೆಲ್ಲವನ್ನು ಮೀರಿದ ಜನ್ರು ಗಿಡ ಬೆಳೆಸೋಣ ನಾಡು ಉಳಿಸೋಣ ಅನ್ನೋ ಮಂತ್ರವನ್ನು ನಿತ್ಯ ಜಪಿಸ್ತಾಯಿದ್ದಾರೆ. ಗದಗ ನಗರದ ಕೂಗಳತೆಯ ದೂರದಲ್ಲಿರುವ ಕಳಸಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಾರಿಗೆ ನಗರದ ಜನ್ರು ಪ್ರತಿದಿನವೂ ಹಸಿರೀಕರಣಕ್ಕೆ ಮುಂದಾಗಿದ್ದು, ಇಡೀ ಗದಗ ಸುತ್ತಾಡಿ ಬಿಸಿಲಿನ ಬೇಗೆಗೆ ಬೆಂದು ಈ ಸಾರಿಗೆ ನಗರಕ್ಕೆ ಕಾಲಿಟ್ರೆ ಕೂಲ್ ಕೂಲ್ ವಾತಾವರಣ ನಿಮಗೆ ಸಿಕ್ಕತ್ತೆ. ಅಷ್ಟಕ್ಕೂ ಇಷ್ಟೆಲ್ಲ ಹಸಿರು ಕಾಣೋಕೆ ಸಣ್ಣದಾದ ಕಾಡು ಅನ್ನೋ ರೀತಿ ಕಾಣ್ಸೊಕೆ ಹತ್ತಾರು ವರ್ಷಗಳ ಪರಿಶ್ರಮವಿದೆ ಅವ್ರೆ ಹೇಳ್ತಾರೆ ಕೇಳಿ
ಇನ್ನೂ ಪ್ರತಿ ಮನೆ ಮುಂದೆಯೂ ಸಹ ಐದ್ಹತ್ತು ಹೂ–ಹಣ್ಣಿನ ಸಸಿ ನೆಟ್ಟ ಪರಿಣಾಮ ಇಂದು ಅವೆಲ್ಲ ಮರವಾಗಿ ಫಲ ಕೊಡುತ್ತಿವೆ ಶ್ರಮಪಟ್ಟವರಿಗೆಲ್ಲ ವರವಾಗಿ ಪರಿಣಮಿಸಿವೆ. ಅಪ್ಪಿ ತಪ್ಪಿ ಈ ಏರಿಯಾಗಿ ನಿವೇನಾದ್ರೂ ಹೋದ್ರೆ ನಿಮ್ಮನ್ನು ಅಲ್ಲಿನ ಜನ್ರಿಗೂ ಮುಂಚೆ ಇವುಗಳೇ ಕೈ ಬೀಸಿ ಕರೆಯುತ್ತವೆ. ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲಿ ಗಿಡಮರಗಳು ಹೆಚ್ಚಾಗಲು ಈ ಕಾಲೋನಿಯಲ್ಲಿ ಜರುಗೋ ಪ್ರತಿ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಸಂರಕ್ಷಣೆ ಮಾಡ್ತಾ ಬಂದದ್ದೇ ಇದಕ್ಕೆ ಪ್ರಮುಖ ಕಾರಣವಾಗಿದೆ
ಒಟ್ಟಿನಲ್ಲಿ ಒಂದು ದಿನ ಸಸಿನೆಟ್ಟು ಸಂಭ್ರಮಿಸುವರ ಮಧ್ಯೆ ಅಂದು ಇಂದು ಎಂದೆಂದೂ ಸಹ ಸಸ್ಯಸಂಕುಲವನ್ನು ಬೆಳೆಸಿ ಪರಿಸರದ ಕಾಳಜಿಯ ಜೊತೆಗೆ ಹೂ–ಹಣ್ಣುಗಳ ಫಲ ಸೇವನೆ ಮೂಲಕ ಪ್ರಕೃತಿಯ ಆರಾಧನೆ ಹಾಗೂ ಸದ್ಬಳಕೆ ಮಾಡಿಕೊಳ್ತಿರುವ ಈ ಜನರು ಇಡೀ ರಾಜ್ಯಕ್ಕೆ ಮಾದರಿಯಂದ್ರೆ ತಪ್ಪಾಗೋದಿಲ್ಲ. ಇಲ್ಲಿನ ಹಿರಿಯರು ಮಾಡುವ ಪರಿಸರ ಪೂಜೆಯನ್ನು ಪ್ರತಿ ಮನೆಯ ಮಕ್ಕಳು ರೂಢಿಸಿಕೊಂಡಿದ್ದು ಇನ್ನು ವಿಶೇಷವಾಗಿದ್ದು ಪರಿಸರ ದಿನಾಚರಣೆ ಒಂದು ದಿನವಲ್ಲ ಪ್ರತಿದಿನವೂ ಬೇಕೆನ್ನುವ ಈ ಜನ್ರಿಗೆ ಪರಿಸರಪ್ರೇಮಿಗಳು ನಮ್ಮದೊಂದು ಸಲಾಂ ಎನ್ನುತ್ತಿದ್ದಾರೆ.