ಮೆಕ್ಸಿಕೋ: ಅಮೆರಿಕಾ ಮತ್ತು ಮೆಕ್ಸಿಕನ್ ಗಡಿಯಲ್ಲಿರುವ ಸಿಯುಡಾಡ್ ಜುವಾರೆಜ್ನ ವಲಸಿಗರ ಕೇಂದ್ರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಘಟನೆಯಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದು ಸುಮಾರು 100 ಮಂದಿ ಗಾಯಗೊಂಡಿದ್ದಾರೆ.
ಮೆಕ್ಸಿಕೊ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಸ್ಟಾಂಟನ್-ಲೆಡ್ರೆ ಸೇತುವೆಯ ಬಳಿ ಇರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಮೈಗ್ರೇಷನ್ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕಳೆದ ತಡರಾತ್ರಿ ಸುಮಾರು 71 ವಲಸಿಗರನ್ನು ಕೇಂದ್ರಕ್ಕೆ ಕರೆತಂದ ಸ್ವಲ್ಪ ಸಮಯದ ಬಳಿಕ ಈ ಘಟನೆ ಸಂಭವಿಸಿದ್ದು, ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಎಲ್ ಪಾಸೊ ಟೆಕ್ಸಾಸ್ನಿಂದ ರಿಯೊ ಗ್ರಾಂಡೆ ನದಿಗೆ ಅಡ್ಡಲಾಗಿರುವ ಮೆಕ್ಸಿಕನ್ ನಗರವಾದ ಸಿಯುಡಾಡ್ ಜುರೆಜ್ ಇತ್ತೀಚಿನ ವಾರಗಳಲ್ಲಿ ಜನರ ಒಳಹರಿವನ್ನು ಕಂಡಿದೆ ಎಂದು ಬಿಬಿಸಿ ವರದಿ ಮಾಡಿದೆ.