ಕೋಲಾರ: ಕೆ.ಜಿ.ಎಫ್ (KGF) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4 ಕೋಟಿ 5 ಲಕ್ಷ ರೂಪಾಯಿ ಹಣವನ್ನ ವಶಕ್ಕೆ ಪಡೆದಿದ್ದಾರೆ.
ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಬಳಿ ಇರುವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ನ ವಿಲ್ಲಾ ದಲ್ಲಿರಿಸಿದ್ದ ಕಂತೆ ಕಂತೆ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (Ramesh) ಅನ್ನೋರಿಗೆ ಸೇರಿದ ವಿಲ್ಲಾ ಇದಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕೆಜಿಎಫ್ ಎಸ್ಪಿ ಧರಣಿದೇವಿ ನೇತೃತ್ವದ ದಾಳಿ ಮಾಡಿದ್ದಾರೆ.
ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ 279 ನಂಬರ್ ವಿಲ್ಲಾದಲ್ಲಿ ಪತ್ತೆಯಾದ ಹಣ ಮತದಾರರಿಗೆ ಹಂಚಲು ಸಂಗ್ರಹಿಸಿದ್ದು ಎನ್ನಲಾಗಿದೆ. ಬಂಗಾರಪೇಟೆ ಪಂಚಾಯ್ತಿ ವಾರ ಹೆಸರು ಬರೆದು ಬಂಡಲ್ ಮಾಡಿಟ್ಟಿದ್ದ ಹಣ ಇದಾಗಿದ್ದು, ಕೆಜಿಎಫ್ ಎಸ್ಪಿ ಧರಣಿದೇವಿ ಖಾಸಗಿ ಕಾರ್ನಲ್ಲಿ ಬಂದು ದಾಳಿ ಮಾಡಿದ್ದಾರೆ. ದಾಳಿ ವಿಚಾರ ತಿಳಿಯುತ್ತಿದ್ದಂತೆ ಕಾರು ಬಿಟ್ಟು ಮಾಲೀಕ ರಮೇಶ್ ಪರಾರಿಯಾಗಿದ್ದಾರೆ.