ಬೆಂಗಳೂರು:- ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ಅಮೀಷವೊಡ್ಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತದೆ. ಅಕ್ರಮದ ಮೂಲಕ ಸಂಪತ್ತು ಗಳಿಸಿದ ಶ್ರೀಮಂತರು ವಿರೋಧ ಪಕ್ಷಗಳಲ್ಲಿ ಮಾತ್ರ ಇದ್ದಾರೆಯೇ? ಬಿಜೆಪಿಯಲ್ಲಿ ಯಾರೂ ಇಲ್ಲವೇ? ಬಿಜೆಪಿ ಅವರೇ ಭ್ರಷ್ಟಾಚಾರದ ಮೂಲ ಪಿತಾಮಹರು ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಇಂದಿಗೂ ಅವರು ಆಪರೇಷನ್ ಕಮಲಕ್ಕೆ ಪ್ರಯತ್ನಿಸುತ್ತಿದ್ದಾರೆ. ನಮ್ಮ ಶಾಸಕರಿಗೆ ರಾಜೀನಾಮೆ ನೀಡುವಂತೆ 50 ಕೋಟಿ ರೂ. ಅಮಿಷವೊಡ್ಡತ್ತಿದ್ದಾರೆ. ನಿಮ್ಮ ಚುನಾವಣಾ ವೆಚ್ಚಕ್ಕೂ ಹಣ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಯಾವ ಹಣದ ಭರವಸೆ ನೀಡುತ್ತಿದ್ದಾರೆ? ಅದು ಕಪ್ಪು ಹಣ ಅಲ್ಲವೇ? ಅದು ಭ್ರಷ್ಟಾಚಾರದ ಹಣವಲ್ಲವೇ? ಎಂದು ಸಿಎಂ ಕೆಂಡಕಾರಿದರು.