ಹೊಸಕೋಟೆ: ವೈದ್ಯರ ನಿರ್ಲಕ್ಷ್ಯದಿಂದ 6 ತಿಂಗಳ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಕಂಬಳಿಪುರ ನಿವಾಸಿ ವೇಣುಗೋಪಾಲ್ ಎಂಬುವವರ 6 ತಿಂಗಳ ಮೃತಪಟ್ಟ ಮಗು.
ಓವರ್ ಡೋಸ್ ಕೊಟ್ಟಿದ್ದರಿಂದಲೇ ಮಗು ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ. ಕಳೆದ 15 ದಿನಗಳಿಂದ ಹೊಟ್ಟೆ ನೋವಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಓವರ್ ಡೋಸ್ ನೀಡಿದ್ದರಿಂದ ಮಗು ಮೃತಪಟ್ಟಿದೆ. ಆಸ್ಪತ್ರೆಯ ಎಲ್ಲಾ ಮೆಡಿಕಲ್ಗಳನ್ನು ಬಂದ್ ಮಾಡಿಸಿ ಪೋಷಕರಿಂದ ಗಲಾಟೆ ಮಾಡಲಾಗಿದೆ.