ಏಳು ದಿನದಲ್ಲಿ ಒಂದೇ ಕುಟುಂಬದ 6bಜನರನ್ನು ಕಿರಾತಕರುಲ ಕೊಲೆ ಮಾಡಿದ್ದು, ಕಾರಣ ಕೇಳಿದ್ರೆ ಶಾಕ್ ಹಾಗ್ತೀರಾ!?
ಪ್ರಸಾದ್ ಮತ್ತು ಪ್ರಶಾಂತ್ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮುಟುಕೂರ್ ಗ್ರಾಮದವರು. ಇವರಿಬ್ಬರೂ ಬಾಲ್ಯದಿಂದಲೂ ಆತ್ಮೀಯ ಗೆಳೆಯರು. ವ್ಯಾಪಾರದಲ್ಲಿ ನಷ್ಟ, ಮನೆಯಲ್ಲಿ ಬಡತನ ಸೇರಿದಂತೆ ನಾನಾ ಕಾರಣಗಳಿಂದ ಪ್ರಸಾದ್ ಹಲವರಿಂದ ಹಣ ಪಡೆದು ಸಾಲಗಾರನಾಗಿದ್ದ.
ಪ್ರಸಾದ್ ಈಗಾಗಲೇ ಸಾಕಷ್ಟು ಸಾಲ ಪಡೆದಿದ್ದರಿಂದ ಬ್ಯಾಂಕ್ನಿಂದ ಆತ ಸಾಲ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಸಾದ್ಗೆ ಸಹಾಯ ಮಾಡುವುದಾಗಿ ಹೇಳಿದ ಸ್ನೇಹಿತ ಪ್ರಶಾಂತ್ ಬ್ಯಾಂಕ್ನಲ್ಲಿ ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಅಲ್ಲದೆ ಪ್ರಸಾದ್ನ ಹೆಸರಲ್ಲಿರುವ ಮನೆಯನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಿದರೆ ತಕ್ಷಣವೇ ಬ್ಯಾಂಕ್ನಿಂದ ಸಾಲ ಪಡೆಯಬಹುದು ಎಂದು ಹೇಳಿದ್ದಾನೆ. ಪ್ರಶಾಂತ್ನ ಮಾತು ನಂಬಿದ ಪ್ರಸಾದ್ ತನ್ನ ಮನೆಯನ್ನು ಆತನಿಗೆ ದಾಖಲೆ ರೂಪದಲ್ಲಿ ಬರೆದು ಕೊಟ್ಟಿದ್ದಾನೆ.
ಮನೆ ಬರೆದು ಬಹಳ ದಿನಗಳಾದರೂ ಪ್ರಶಾಂತ್ ಬ್ಯಾಂಕಿನಿಂದ ಸಾಲ ಪಡೆದಿರಲಿಲ್ಲ. ಇದರಿಂದಾಗಿ ಪ್ರಸಾದ್ ಮನೆಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಹೇಳಿದ್ದಾನೆ. ಆದರೆ ಅದಾಗಲೇ ಹೇಗಾದರೂ ಮಾಡಿ ಮನೆಯನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದ ಪ್ರಶಾಂತ್, ಸ್ನೇಹಿತ ಪ್ರಸಾದ್ನನ್ನು ಕೊಲೆ ಮಾಡಲು (Crime News) ನಿರ್ಧರಿಸಿದ್ದಾನೆ.
ಕಳೆದ ಡಿಸೆಂಬರ್ 9ರಂದು ಪ್ರಶಾಂತ್, ಪ್ರಸಾದ್ನನ್ನು ಕೊಂದು ಶವವನ್ನು ಅದೇ ಪ್ರದೇಶದ ದಿಚಿಪಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿಯ ಕಾಡಿನಲ್ಲಿ ಹೂತಿಟ್ಟಿದ್ದ. ಆಮೇಲೆ, ಪ್ರಶಾಂತ್ ಪ್ರಸಾದ್ನ ಪತ್ನಿ ರಮಾ ಬಳಿ ಹೋಗಿ ‘ಸಾಲಗಾರರು ದೂರು ನೀಡಿದ್ದರಿಂದ ಪ್ರಸಾದ್ನನ್ನು ಪೊಲೀಸರು ಹಿಡಿದಿದ್ದಾರೆ’ ಎಂದು ತಿಳಿಸಿದ್ದಾನೆ. ಅಲ್ಲದೇ, ‘ಪ್ರಸಾದನನ್ನು ನೋಡಲು ಠಾಣೆಗೆ ಹೋಗಬಹುದು’ ಎಂದು ಹೇಳಿ ರಮಾಳನ್ನು ಬಸರ ನಗರದ ಸಮೀಪ ಕಾಡಿಗೆ ಕರೆದೊಯ್ದು ಹೊಡೆದು ಕೊಂದು ಶವವನ್ನು ಗೋದಾವರಿ ನದಿಗೆ ಎಸೆದಿದ್ದಾರೆ. ನಂತರ ಇದೇ ಪ್ರಶಾಂತ್, ಪ್ರಸಾದ್ ಅವರ ಸಹೋದರಿಯ ಬಳಿಗೆ ಹೋಗಿ ಪೊಲೀಸರು ನಿಮ್ಮ ಸಹೋದರ ಮತ್ತು ಅವರ ಪತ್ನಿ ರಮಾಳನ್ನು ಸಹ ಬಂಧಿಸಿದ್ದಾರೆ ಎಂದು ತಿಳಿಸಿದ್ದಾನೆ. ನಂತರ ಆಕೆಯನ್ನು ಸಹ ತೆಲಂಗಾಣ ರಾಜ್ಯದ ಕಾಮ ರೆಡ್ಡಿ ಜಿಲ್ಲೆಗೆ ಕರೆದೊಯ್ದು ಕೊಂದು, ದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಾಡಿನಲ್ಲಿ ಸುಟ್ಟು ಹಾಕಿದ್ದಾನೆ. ಮಹಿಳೆಯ ಅರೆ ಸುಟ್ಟ ಶವ ಕಂಡ ಅಲ್ಲಿಯ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ದೌಡಾಯಿಸಿ ಶವವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ, ಪ್ರಶಾಂತ್ ಅದಾಗಲೇ ಪ್ರಸಾದ್ನ 2 ಪುಟ್ಟ ಮಕ್ಕಳನ್ನು ಕೊಂದು ಶವಗಳನ್ನು ನದಿಗೆ ಎಸೆದಿದ್ದ.