70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಈ ಬಾರಿ ಕನ್ನಡ ಚಿತ್ರರಂಗಕ್ಕೆ ಹಲವು ಪ್ರಶಸ್ತಿಗಳು ಅರಸಿ ಬಂದಿದೆ. ಕಾಂತಾರ ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದ್ರೆ, ಯಶ್ ನಟನೆಯ ಕೆಜಿಎಫ್-2 ಸಿನಿಮಾಗೆ ಅತ್ಯುತ್ತಮ ಕನ್ನಡ ಚಿತ್ರದ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಕೇಂದ್ರ ಸರ್ಕಾರದ ವಾರ್ತಾ, ಪ್ರಸಾರ ಇಲಾಖೆಯಿಂದ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದೆ. 2022ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಬಿಡುಗಡೆಯಾದ ಸಿನಿಮಾಗಳಿಗೆ ಇಂದು ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕನ್ನಡದ ಕೆಜಿಎಫ್-2 ಚಿತ್ರಕ್ಕೆ ಎರಡು ಪ್ರಶಸ್ತಿ ಒಲಿದು ಬಂದಿದೆ. ಕೆಜಿಎಫ್-2 ಸಿನಿಮಾಗೆ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ ಸಾಹಸ ವಿಭಾಗದಲ್ಲೂ ಕೆಜಿಎಫ್-2 ಚಿತ್ರಕ್ಕೆ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿಗೆ ಅತ್ತುತ್ತಮ ನಟ ಪ್ರಶಸ್ತಿ ಘೋಷಣೆಯಾಗಿದೆ.
ಜನಮೆಚ್ಚುಗೆ ಗಳಿಸಿದ್ದ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅಭಿನಯ ಅಮೋಘವಾಗಿತ್ತು. ಅತ್ಯುತ್ತಮ ನಟ ಜೊತೆಗೆ ಅತ್ಯುತ್ತಮ ಮನೋರಂಜನಾ ಪ್ರಶಸ್ತಿಗೆ ಕಾಂತಾರ ಸಿನಿಮಾ ಆಯ್ಕೆಯಾಗಿದೆ. ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.
ಇನ್ನು, ಮಲಯಾಳಂನ ‘ಆಟಂ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ತಮಿಳಿನ ತಿರುಚಿತ್ರಾಂಬಲಂ ಚಿತ್ರದಲ್ಲಿ ಅಭಿನಯಿಸಿರುವ ನಿತ್ಯಾ ಮೆನನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಯಾರಿಗೆ ಒಲಿದಿದೆ ಪ್ರಶಸ್ತಿ
ರಿಷಬ್ ಶೆಟ್ಟಿ – ಅತ್ಯುತ್ತಮ ನಟ
ಕೆಜಿಎಫ್-2 – ಅತ್ಯುತ್ತಮ ಕನ್ನಡ ಸಿನಿಮಾ
ಕೆಜಿಎಫ್-2 – ಸಾಹಸ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿ
ಅತ್ಯುತ್ತಮ ಮನರಂಜನಾ ಚಿತ್ರ – ಕಾಂತಾರ
ಅತ್ಯುತ್ತಮ ಚಲನಚಿತ್ರ – ಆಟಂ
ಅತ್ಯುತ್ತಮ ನಟಿ – ನಿತ್ಯಾಮೆನನ್, ಮಾನಸಿ ಪರೇಖ್
ಬೆಸ್ಟ್ ಡೆಬ್ಯುಟ್ ಫಿಲಂ ಡೈರೆಕ್ಟರ್ – ಮಧ್ಯಾಂತರ ಸಿನಿಮಾ ನಿರ್ದೇಶನಕ್ಕಾಗಿ ದಿನೇಶ್ ಶೆಣೈಗೆ ಪ್ರಶಸ್ತಿ
ಬೆಸ್ಟ್ ಆ್ಯಕ್ಷನ್ ಡೈರೆಕ್ಷನ್ – ಸ್ಟಂಟ್ ಕೊರಿಯಾಗ್ರಾಫರ್ ಅನಭೈರವ, ಕೆಜಿಎಫ್-2
ಕನ್ನಡದ ರಂಗ ವಿಭೋಗ ಸಿನಿಮಾಗೆ ನಾನ್ ಫೀಚರ್ ಫಿಲಂ ವಿಭಾಗದಲ್ಲಿ ಪ್ರಶಸ್ತಿ
ಪುರಾಣಿಕ್ ಪ್ರೊಡಕ್ಷನ್ನಲ್ಲಿ ಸುನೀಲ್ ಪುರಾಣಿಕ್ ನಿರ್ದೇಶನದ ಸಿನಿಮಾ
2022ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಬಿಡುಗಡೆಯಾದ ಸಿನಿಮಾಗಳಿಗೆ ಇಂದು ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯ್ಕೆಯಾದ ಸಿನಿಮಾ ತಂಡ ಹಾಗೂ ಅತ್ಯುತ್ತಮ ನಟ, ನಟಿಯರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.