ಹುಬ್ಬಳ್ಳಿ: ಉತ್ತಮ ರೈಲು ಸೇವೆಗೆ ರೈಲ್ವೆ ಇಲಾಖೆಯ ಸನ್ನದ್ಧವಾಗಿದ್ದು ಇನ್ನಷ್ಟು ಸೇವೆಗೆ ದೇಶದಲ್ಲಿ ರೈಲು ಆಧುನಿಕರಣ ನಡೆದಿದೆ ಎಂದು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಹೇಳಿದರು. ವಂದೇ ಮಾತರಂ ರೈಲ್ವೆ ಆರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಈ ಎಲ್ಲ ಸೌಕರ್ಯಕ್ಕೆ ಇದಕ್ಕೆ ನಾನು ರೈಲ್ವೆ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ ದೇಶದಲ್ಕಿ ರೈಲು ಸೇವೆ ಸಾಕಷ್ಡು ಸಹಾಯ ನೀಡುತ್ತದೆ.ದೇಶದ ಅಭಿವೃದ್ಧಿಯಲ್ಲಿ ಇಲಾಖೆಯ ಸಾಕಷ್ಟು ಪಾಲಿದೆ ಕಾರಣ ರೈಲ್ವೆ ಕೆಲಸಕ್ಕಾಗಿ ಕರ್ನಾಟಕಕ್ಕೆ 7000 ಕೋಟಿ ಹಣವನ್ನು ನೀಡಲಾಗಿದ್ದು,
ಇದುವರೆಗೂ ನೀಡಿದ ಅತಿ ಹೆಚ್ಚು ಅನುದಾನ ಇದಲಾಗಿದೆ ಎಂದ ಅವರು ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್ ಆರಂಭವಾಗಿದ್ದು, ನಿಮಗೆಲ್ಲ ಅಭಿನಂದನೆ ಸಲ್ಕಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.ವಂದೇ ಭಾರತ್ ದೇಶದ ಗೌರವ, ಹೆಮ್ಮೆ ಆಗಿದೆ. ಇದು ಸಂಪೂರ್ಣ ಸ್ವದೇಶಿ ನಿರ್ಮಿತ ರೈಲು ಆಗಿದ್ದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೋಶಿ ಅವರು ಅನೇಕ ಬೇಡಿಕೆ ಇಟ್ಟಿದ್ದಾರೆ ಆ ಬಗ್ಗೆ ಇಲಾಖೆಯವರು ಗಮನ ಹರಿಸುತ್ತಾರೆ ಎಂದರು.