ಕತಾರ್ ನ್ಯಾಯಾಲಯವು 8 ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದೆ. ಈ ಬೆಳವಣಿಗೆಯಿಂದ ಭಾರತ ಸರ್ಕಾರಕ್ಕೆ ಆಘಾತ ಉಂಟು ಮಾಡಿದೆ. 8 ಮಾಜಿ ನೌಕಾಪಡೆ ಅಧಿಕಾರಿಗಳ ಕುಟುಂಬಗಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಸಂಪೂರ್ಣ ತೀರ್ಪಿಗಾಗಿ ಕಾಯುತ್ತಿರುವುದಾಗಿ ಹೇಳಿದೆ. 8 ಕುಟುಂಬಗಳ ಸದಸ್ಯರು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಸಂತ್ರಸ್ತರ ಕುಟುಂಬಗಳ ಸದಸ್ಯರು ಮತ್ತು ಅವರ ಆಪ್ತರು ಮತ್ತು ಹಿತೈಷಿಗಳು ಈ 8 ಜನರನ್ನು ಬಿಡುಗಡೆ ಮಾಡಿ ದೋಹಾದಿಂದ ಭಾರತಕ್ಕೆ ಕರೆತರಲು ಕ್ರಮಕೈಗೊಳ್ಳುವಂತೆ ಕೇಂದ್ರವನ್ನು ಕೇಳುತ್ತಿದ್ದಾರೆ. ಕತಾರ್ ನ್ಯಾಯಾಲಯದ ತೀರ್ಪಿನ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ತೀವ್ರ ಆಘಾತ ವ್ಯಕ್ತಪಡಿಸಿತ್ತು. ಮೇಜರ್ ಜನರಲ್ ಸತಬಿರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಮುಖೇನ ನೆರವಿಗೆ ಕೋರಿದ್ದಾರೆ.