ಮಹಾಶಿವ ರಾತ್ರಿದಿನದಂದು ಎಲ್ಲೆಲ್ಲೂ ಶಿವ ಮಯವಾಗಿದೆ. ಮುಂಜಾನೆಯಿಂದ ನಗರದ ಎಲ್ಲಾ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಅದ್ದೂರಿಯಾಗಿ ನಡೆದಿದೆ. ಅದ್ರಲ್ಲೂ ಶಿವನ ದೇವಸ್ಥಾನದಲ್ಲಿ ಶಿವನ ದರುಶನ ಪಡೆಯಲು ಭಕ್ತರು ಉತ್ಸುಕರಾಗಿ ಸರತಿಯಲ್ಲಿ ನಿಂತು ಶಿವನದರ್ಶನ ಪಡೆದ್ರು.ಮಹಾಶಿವರಾತ್ರಿಯ ವಿಶೇಷವಾಗಿ ಯಲಹಂಕದ ಅಟ್ಟೂರು ಗ್ರಾಮದ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ.ರುದ್ರಾಭಿಶೇಕ ನಡೆದಿದೆ.
ಸುಮಾರು 8 ಸಾವಿರ ವರ್ಷಗಳ ಇತಿಹಾಸವಿರುವ ಕಾಶಿ ವಿಶ್ವನಾಥ ದೇವಾಲಯ ಹೋಯ್ಸಳ ಕಾಲದ ದೇವಲಾಯವಾಗಿದೆ. ರಥಸಪ್ತಮಿಯಿಂದ ಶಿವರಾತ್ರಿವರೆಗೂ ಭ್ರಮ್ಮಸೂತ್ರ ಹೊಂದಿರೋ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಹಾದು ಹೋಗುವುದು ಇಲ್ಲಿನ ವಿಶೇಷವಾಗಿ.ಮುಂಜಾನೆಯಿಂದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆಯಾಗಿದೆ. ಶಿವನಿಗೆ ವಿವಿಧ ಬಗೆಯ ಅಭೀಷೆಕ ಪೂಜೆ ಮಾಡಲಾಗಿದ್ದು, ಮುಂಜಾನೆಯಿಂದ ಸಾವಿರಾರು ಭಕ್ತರು ಸರತಿ ಸಾಲಲ್ಲಿನಿಂತು ಪರಶಿವನ ದರ್ಶನ ಪಡೆದು ಭಕ್ತರು ಪುನೀತರಾಗಿದ್ದಾರೆ.