ಚೀನಾದಲ್ಲಿ ಕೋವಿಡ್ ನಿಂದ 87 ವರ್ಷದ ವೃದ್ದ ಸಾವು

ಅಂತರಾಷ್ಟ್ರೀಯ

ಬೀಜಿಂಗ್‌: ಚೀನಾದ ರಾಜಧಾನಿಯಲ್ಲಿ ಕೋವಿಡ್‌ನಿಂದ 87 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸೋಂಕು ತಡೆಗೆ ಕಠಿಣ ಕ್ರಮ ಜಾರಿಗೊಳಿಸಿದ ಆರು ತಿಂಗಳ ನಂತರ ವರದಿಯಾದ ಮೊದಲ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಮೇ 27ರಲ್ಲಿ ಶಾಂಘೈನಲ್ಲಿ ಕೋವಿಡ್‌ನಿಂದ ಸಾವು ಸಂಭವಿಸಿತ್ತು. ಇದೀಗ ಕೋವಿಡ್ ಗೆ ಮತ್ತೊಬ್ಬರು ಬಲಿಯಾಗಿದ್ದು ಚೀನಾದಲ್ಲಿ ಮತ್ತೆ ಕೋವಿಡ್ ಭಯ ಹೆಚ್ಚಲು ಕಾರಣವಾಗಿದೆ.

ಹೊಸ ಪ್ರಕರಣದೊಂದಿಗೆ ಮೃತರ ಸಂಖ್ಯೆ 5,227ಕ್ಕೆ ಏರಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ. ದೇಶದಲ್ಲಿ ಶೇ 92ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿದ್ದು, 80 ವರ್ಷ ಮೀರಿದವರಲ್ಲಿ ಲಸಿಕೆ ಪಡೆದವರು ಕಡಿಮೆ ಎಂದೂ ತಿಳಿಸಿದೆ. ಇದೀಗ ಮೃತಪಟ್ಟಿರುವ 87 ವರ್ಷದ ವ್ಯಕ್ತಿ ಲಸಿಕೆ ಪಡೆದಿದ್ದರೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.