ನಾಗಮಂಗಲ: ಆಸ್ಪತ್ರೆಯ ಒಳರೋಗಿಗಳಿಗೆ ಕೊಡುವ ಒಂದು ಮುದ್ದೆ ಸಾಂಬರ್ ಊಟಕ್ಕೆ 92 ರೂಪಾಯಿ ದುಬಾರಿ ವೆಚ್ಚ ತಿಳಿದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಶಾಕ್ ಆಗಿದ್ದಾರೆ.
ನಾಗಮಂಗಲ ಪಟ್ಟಣದ ಜನರಲ್ ಆಸ್ಪತ್ರೆಗೆ ದಿಡೀರ್ ಭೇಟಿ ಕೊಟ್ಟ ಜಿಲ್ಲಾಧಿಕಾರಿಗಳು ಆಸ್ಪತ್ರೆಯ ವಾರ್ಡ್ ಗಳನ್ನ ಪರಿಶೀಲಿಸಿದರು
ಈ ವೇಳೆ ಆಸ್ಪತ್ರೆ ಆಡಳಿತದ ಖರ್ಚು ವೆಚ್ಚದ ಕಡತ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಒಳ ರೋಗಿಗಳ ಊಟಕ್ಕೆ ದುಬಾರಿ ವೆಚ್ಚದ ಬಿಲ್ ಕಂಡು ಶಾಕ್ ಆಗಿದ್ದಾರೆ.
ಇಂದಿರಾ ಕ್ಯಾಂಟೀನ್ ನಲ್ಲಿ 10 ರೂಗೆ ಅನ್ನ ಸಾಂಬಾರ್ ಇದೆ. ನೀವ್ಯಾಕೆ 92 ರೂ ಕೊಡುತ್ತಿದ್ದೀರಿ, ನಾನು ಕೂಡ ಮುದ್ದೆ ತಿನ್ನುತ್ತೇನೆ ಒಂದು ಮುದ್ದೆಗೆ ರಾಗಿ ಮಿಲ್ ಮಾಡಿಸಿ ಹಿಟ್ಟು ತಂದು ಮುದ್ದೆ ಮಾಡಿದರೆ 15 ರೂ ಖರ್ಚಾಗುತ್ತದೆ ಆದರೆ ಇಲ್ಲಿ 92 ರೂ ನಿಗದಿ ಯಾಕೆ ಯಾರು ಈ ಟೆಂಡರ್ ಅನುಮೋದಿಸಿದ್ದು ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.
ಒಂದು ಬಾಳೆ ಹಣ್ಣು ಎಂಟು ರೂ!
ನಾವು ಅಂಗನವಾಡಿಗೆ 6 ರೂಪಾಯಿ ಮೌಲ್ಯದಲ್ಲಿ ಮೊಟ್ಟೆ ಕೊಡುತ್ತಿದ್ದೇವೆ ಇಲ್ಲಿ ಯಾಕೆ ಒಂದು ಮೊಟ್ಟೆಗೆ 10 ರೂ ಇದಲ್ಲದೆ. ಒಂದು ಬಾಳೆ ಹಣ್ಣಿಗೆ 8 ರೂ ನಾ ಇದೇನು ಇಷ್ಟೊಂದು ವೆಚ್ಚ ಈ ಬಗ್ಗೆ ಧರ ಪರಿಶೀಲನೆ ನಡೆಸಿ ನನಗೆ ವರದಿ ನೀಡಿ ಎಂದು ತಹಶೀಲ್ದಾರ್ ನಯಿಂ ವುನ್ನಿಸಾ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಊಟದಲ್ಲಿ ದುಬಾರಿ ವೆಚ್ಚಕ್ಕೆ ಗರಂ ಆದ ಜಿಲ್ಲಾಧಿಕಾರಿಗಳು 100 ರೂಗೆ ಅನ್ನ,ಮುದ್ದೆ ಸಾಂಬರ್ ಚಪಾತಿ ಊಟ ಸಿಗಲಿದೆ ಇಲ್ಲಿ ಯಾಕೆ ಒಂದು ಅನ್ನ ಸಾಂಬಾರ್ ಮೊಟ್ಟೆಗೆ 92 ರೂ ಬಿಲ್ ಮಾಡುತ್ತಿದ್ದೀರಿ
ಏನಿದು 12 ಲಕ್ಷ ಕೊಟೇಷನ್ ಇ ಟೆಂಡರ್ ಯಾಕೆ ಮಾಡಿಲ್ಲ ಇದು ತಪ್ಪು ಲೆಕ್ಕಾಚಾರವಾಗಿದೆ ಪರಿಶೀಲನೆ ನಡೆಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಈ ವೇಳೆ ಟಿಹೆಚ್ಓ ಡಾ ಪ್ರಸನ್ನ, ವೈದ್ಯರಾದ ಜ್ಯೋತಿ ಲಕ್ಷ್ಮಿ ಆಸ್ಪತ್ರೆ ಸಿಬ್ಬಂದಿಗಳಾದ ಮೋಹನ್ ಇತರರು ಉಪಸ್ಥಿತರಿದ್ದರು.