ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಬಳಿಕ ನಾಪತ್ತೆಯಾಗಿದ್ದ ಪ್ರಕರಣದ 9ನೇ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 19 ಆಗಿದೆ.
ರಾಜು ಅಲಿಯಾಸ್ ಧನರಾಜು ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಧನರಾಜು ಮೃತ ರೇಣುಕಾಸ್ವಾಮಿಗೆ ಮೆಗ್ಗರ್ ಡಿವೈಸ್ ಬಳಸಿ ಕರೆಂಟ್ ಶಾಕ್ ನೀಡಿದ್ದ ಎನ್ನಲಾಗಿದೆ. ಎ5 ಆರೋಪಿ ನಂದೀಶ್ ಜೊತೆಗೂಡಿ, ಮೃತನಿಗೆ ಕರೆಂಟ್ ಶಾಕ್ ನೀಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೆಗ್ಗರ್ ಡಿವೈಸ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್ನಲ್ಲಿ ಚಿತ್ರ ಹಿಂಸೆ ನೀಡಿದ್ದರು. ಈ ವೇಳೆ ಎ9 ಆರೋಪಿ ರಾಜು ಹಾಗೂ ಎ5 ಆರೋಪಿ ನಂದೀಶ್ ಇಬ್ಬರು ಸೇರಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದರು. ತೀವ್ರ ಹಲ್ಲೆ, ಮರ್ಮಾಂಗಕ್ಕೆ ಒದ್ದು ಹಾಗೂ ಕರೆಂಟ್ ಶಾಕ್ ನೀಡಿ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಲಾಗಿತ್ತು. ಮೃತದೇಹ ಮೋರಿಗೆ ಎಸೆದ ಬಳಿಕ ಆರೋಪಿ ರಾಜು ಪರಾರಿಯಾಗಿದ್ದ. ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಅರೆಸ್ಟ್ ಆದರೂ ರಾಜು ನಾಪತ್ತೆಯಾಗಿದ್ದ. ಕೊಲೆಗೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.