ಇರುವೆಗಳು ಆಗಾಗ್ಗೆ ಸಕ್ಕರೆ ಡಬ್ಬಿಗಳಲ್ಲಿ , ಬೆಲ್ಲದ ಡಬ್ಬಿಗಳಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಹಾಗಿದ್ರೆ ಬೆಲ್ಲ, ಸಕ್ಕರೆ ಡಬ್ಬಿಗಳಿಗೆ ಇರುವೆ ಬಾರದಂತೆ ತಡೆಯೋದು ಹೇಗೆ? ಇರುವೆಗಳಿಂದಾಗಿ ಬೆಲ್ಲದ ಪುಡಿ ಬೇಗ ಹಾಳಾಗುತ್ತದೆ. ಬೆಲ್ಲದ ಪುಡಿಯಲ್ಲಿರುವ ಇರುವೆಗಳಿಂದ ನಿಮಗೂ ತೊಂದರೆಯಾದರೆ, ಈ ಲೇಖನ ನಿಮಗೆ ಸಹಾಯಕ್ಕೆ ಬರಬಹುದು.
ಈ ಟಿಪ್ಸ್ ಪಾಲಿಸುವ ಮೂಲಕ ನೀವು ಸುಲಭವಾಗಿ ಇರುವೆಗಳು ಸಿಹಿ ತಿಂಡಿಗೆ ಬಾರದಂತೆ ಕಾಪಾಡಬಹುದು. ಅದಕ್ಕಾಗಿ ನೀವು ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿದ್ರೆ ಸಾಕು.
ಸಕ್ಕರೆ ಹೈ ಎನರ್ಜಿ ಫುಡ್. ಇರುವೆಗಳು ಯಾವಾಗಲೂ ಆಹಾರವನ್ನು ಸಂಗ್ರಹಿಸಲು ಮತ್ತು ಗೂಡುಗಳನ್ನು ನಿರ್ಮಿಸಲು ಕಷ್ಟಪಡುತ್ತವೆ. ಅದರ ಮೇಲೆ ನಿರಂತರವಾಗಿ ಕೆಲಸ ಮಾಡಲು ಅವುಗಳಿಗೆ ಸಾಕಷ್ಟು ಕ್ಯಾಲರಿಗಳು ಬೇಕಾಗುತ್ತವೆ. ಸಕ್ಕರೆಯಲ್ಲಿ ಹೆಚ್ಚಿನ ಕ್ಯಾಲರಿಗಳು ಇರುವುದರಿಂದ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಸಕ್ಕರೆ ಇರುವೆಗಳಿಗೆ ಕಷ್ಟಪಟ್ಟು ಕೆಲಸ ಮಾಡಲು ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಅದಕ್ಕಾಗಿಯೇ ಅವು ಸಕ್ಕರೆಗೆ ಆಕರ್ಷಿತವಾಗುತ್ತವೆ.
ಬೆಳ್ಳುಳ್ಳಿ ಬಳಸಿ
ಬೆಲ್ಲದ ಪುಡಿ ಅಥವಾ ಸಕ್ಕರೆಯಲ್ಲಿ ಇರುವೆ ಬರೋದನ್ನು ತಡೆಯಲು, ಉಗ್ರಾಣ ಅಥವಾ ಕ್ಯಾನ್ ಗಳ ಸುತ್ತಲೂ ಬೆಳ್ಳುಳ್ಳಿಯನ್ನು ನೇತುಹಾಕಿ. ಇದನ್ನು ಮಾಡುವುದರಿಂದ, ಇರುವೆಗಳು ಬೆಲ್ಲ ಅಥವಾ ಸಕ್ಕರೆ ಕ್ಯಾನ್ ಬಳಿ ಬರುವುದಿಲ್ಲ. ಏಕೆಂದರೆ ಬೆಳ್ಳುಳ್ಳಿಯು ಬಲವಾದ ವಾಸನೆಯನ್ನು ಹೊಂದಿರುತ್ತದೆ, ಅದು ಇರುವೆಗಳಿಗೆ ಇಷ್ಟವಾಗೋದಿಲ್ಲ ಮತ್ತು ವಾಸನೆಯಿಂದ ಓಡಿಹೋಗುತ್ತವೆ.
ಬೇವಿನ ಎಲೆಗಳನ್ನು ಬಳಸಿ
ನೀವು ಬೇವಿನ ಎಲೆಗಳನ್ನು ಬೆಲ್ಲದ ಡಬ್ಬಿಯಲ್ಲಿ ಹಾಕಬಹುದು ಏಕೆಂದರೆ ಬೇವಿನ ಪರಿಮಳಕ್ಕೆ ಇರುವೆಗಳು ಓಡಿ ಹೋಗುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ, ನೀವು ತಾಜಾ ಮತ್ತು ಹಸಿರು ಬೇವಿನ ಎಲೆಗಳನ್ನು ಬಳಸಬೇಕು. ಅದನ್ನು ಬೆಲ್ಲದ ಡಬ್ಬಿಯಲ್ಲಿ ಹಾಕುವ ಮೂಲಕ ಇರುವೆಗಳನ್ನು ಓಡಿಸಬಹುದು.
ಕಾಫಿ ಪುಡಿ
ಇರುವೆಗಳು ಕಾಫಿಯ ವಾಸನೆಯನ್ನು ದ್ವೇಷಿಸುತ್ತವೆ ಎಂದು ತಿಳಿದರೆ ನಿಮಗೆ ಶಾಕ್ ಆಗಬಹುದು ಅಲ್ವಾ?. ನೀವು ಇರುವೆಗಳನ್ನು ಓಡಿಸಲು ಬಯಸುವ ಸ್ಥಳದ ಮೇಲೆ ಕಾಫಿ ಪುಡಿಯನ್ನು ಹರಡಿ. ಇರುವೆಗಳು ಪ್ರವೇಶಿಸದಂತೆ ತಡೆಯಲು ನೀವು ನಿಮ್ಮ ಅಡುಗೆ ಮನೆಯ ಬಳಿ ಮತ್ತು ಬೆಲ್ಲದ ಡಬ್ಬಿ ಬಳಿ ಕಾಫಿ ಪುಡಿ ಸಿಂಪಡಿಸಬಹುದು.