ದಾವಣಗೆರೆ: ರಾಜ್ಯದಲ್ಲಿ ವಕ್ಫ್ ವಿವಾದ ದಿನದಿನಕ್ಕೂ ಹೆಚ್ಚಾಗುತ್ತಲೇ ಇದೆ. ರೈತರ ಆಸ್ತಿಯನ್ನು ಕಬಳಿಸಿದೆ.. ಮಠ, ಮಂದಿರಗಳು, ಶಾಲಾ ಜಾಗಗಳು, ಕೋಟೆಗಳು ವಕ್ಫ್ ತೆಕ್ಕೆಗೆ ಸೇರಿವೆ ಅನ್ನೋ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಇದೀಗ ಇಡೀ ಬಡಾವಣೆಗೆ ಬಡಾವಣೆಯೇ ವಕ್ಫ್ ಹೆಸರಿಗೆ ಸೇರಿಸಲಾಗಿದೆ.
ದಾವಣಗೆರೆ ನಗರದಲ್ಲಿರುವ ಪ್ರತಿಷ್ಠಿತ ಬಡಾವಣೆ ಪಹಣಿಯಲ್ಲೂ ವಕ್ಫ್ ಹೆಸರು ಸೇರ್ಪಡೆಯಾಗಿದೆ. ಪಿ.ಜೆ ಬಡಾವಣೆಯ ಒಂದು ಏರಿಯಾ ಪೂರ್ತಿ ಈಗ ವಕ್ಫ್ ಆಸ್ತಿ ಎಂದು ಮಾಡಲಾಗಿದೆ. 9 ವರ್ಷಗಳ ಹಿಂದೆ ಸರ್ವೆ ನಂ.53ರ ಪಹಣಿಯಲ್ಲಿ ವಕ್ಫ್ ಹೆಸರು ಸೇರ್ಪಡಿಸಲಾಗಿದೆ. ಖಬರಸ್ತಾನ ಸುನ್ನಿ ವಕ್ಫ್ ಸಂಸ್ಥೆ ಹೆಸರಲ್ಲಿ 4.13 ಎಕರೆ ಜಮೀನು ವಕ್ಫ್ ಹೆಸರಿಗೆ ನೊಂದಣಿ ಮಾಡಲಾಗಿದೆ.
2015 ರಲ್ಲಿ ಮ್ಯೂಟೇಷನ್ ರಿಜಿಸ್ಟರ್ ಕೋರ್ಟ್ ಆದೇಶದಂತೆ ಮ್ಯೂಟೇಷನ್ ಅಂತ ಉಲ್ಲೇಖ ಮಾಡಿ, ಎಂ.ಆರ್. ನಂಬರ್ ಅದಲು ಬದಲು ಮಾಡಿ ಆದೇಶ ಹೊರಡಿಸಲಾಗಿದೆ. ಒಂದೆಡೆ ಪಾಲಿಕೆ ನಿವಾಸಿಗಳಿಂದ ಕಂದಾಯ ಕಟ್ಟಿಸಿಕೊಳ್ಳುತ್ತಿದೆ. ಇನ್ನೊಂದು ಕಡೆ ವಕ್ಪ್ ಹೆಸರಿಗೆ ಪಹಣೆ ಬಂದಿರುವುದು ಸ್ಥಳೀಯರಲ್ಲಿ ಅತಂಕ ಸೃಷ್ಟಿಸಿದೆ. ಈ ಬಗ್ಗೆ ವಕೀಲ ಅನೀಶ್ ಪಾಷಾ ಎಂಬುವರ ಪ್ರತಿಕ್ರಿಯಿಸಿದ್ದು, ಇದು ಅಧಿಕಾರಿಗಳಿಂದ ಆಗಿರುವ ಯಡವಟ್ಟು ಎಂದಿದ್ದಾರೆ.