ಬೆಂಗಳೂರು:- ಲವರ್ ತಾಯಿಗೆ ಚಿಕಿತ್ಸೆ ಕೊಡಲು ಕಳ್ಳತನಕ್ಕಿಳಿದ ಡ್ಯಾನ್ಸ್ ಮಾಸ್ಟರ್ ನನ್ನು ಅರೆಸ್ಟ್ ಮಾಡಲಾಗಿದೆ.
ಪ್ರೇಯಸಿಯ ತಾಯಿಯ ಚಿಕಿತ್ಸೆಗಾಗಿ ಚೈನ್ ಕದಿಯುತ್ತಿದ್ದ ಡ್ಯಾನ್ಸ್ ಮಾಸ್ಟರ್ನನ್ನು ಜಿಗಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಡಾಫ್ ಬಂಧಿತ ಆರೋಪಿ. ನಡಾಫ್ನ ಪ್ರೇಯಸಿಯ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗಾಗಿ ಆರೋಪಿ ಚೈನ್ ಕಳ್ಳತನಕ್ಕೆ ಇಳಿದಿದ್ದ ಎಂದು ತಿಳಿದು ಬಂದಿದೆ.
ಕಳೆದ ಆಗಸ್ಟ್ನಲ್ಲಿ ಆರೋಪಿ ಜಿಗಣಿಯ ರತ್ನಮ್ಮ ಎಂಬವರ ಸರವನ್ನು ಕಳ್ಳತನ ಮಾಡಿದ್ದ. ಬುಲೆಟ್ ಬೈಕ್ನಲ್ಲಿ ಬಂದು ಸಿಗರೇಟ್ ಖರೀದಿಸುವ ನೆಪದಲ್ಲಿ ಮಾಂಗಲ್ಯದ ಸರ ಎಗರಿಸಿದ್ದ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಂಧಿತ ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಹಿಂದೆ ಆರೋಪಿ ಕಳ್ಳತನ ಕೇಸ್ನಲ್ಲಿ ಗದಗದಲ್ಲಿ ಬಂಧಿತನಾಗಿದ್ದು, ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ಎನ್ನಲಾಗಿದೆ.