ಚಿಕ್ಕಮಗಳೂರು : ಆಲದಮರಕ್ಕೆ ನಿನ್ನನ್ನು ನೇಣು ಹಾಕಿ ಸಾಯಿಸ್ಬೇಕು ಎಂದು ಹೇಳುವ ಮೂಲಕ ಸಚಿವ ಜಮೀರ್ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿರಲು ನೀನು ನಾಲಾಯಕ್ ಎಂದಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25 ಸಾವಿರ ಬಾಂಗ್ಲಾದೇಶಿ ಮುಸ್ಲಿಮರಿದ್ದಾರೆ.
ಅವರನ್ನ ಜಮೀರ್ ಸಾಕಿದ್ದಾನೆ, ಸಾಕ್ತಿದ್ದಾನೆ, ಓಟರ್ ಲೀಸ್ಟ್ ತಯಾರು ಮಾಡಿದ್ದಾರೆ. ಈ ರೀತಿ ಅನೇಕ ಬ್ಲಂಡರ್ ಗಳನ್ನ ಸನ್ಮಾನ್ಯ ಔರಂಗಜೇಬ್ ಮಾಡಿದ್ದಾನೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಬಿಜೆಪಿಯವರು ಜಮೀರ್ ನನ್ನು ಗಡಿಪಾರು, ಕಿತ್ತಾಕಿ, ಸಸ್ಪೆಂಡ್ ಮಾಡಿ ಅಂತಿದ್ದಾರೆ. ಆದರೆ ಗಡಿಪಾರು, ಸಸ್ಪೆಂಡ್ ಬೇಡ. ಯಾವುದಾರೂ ಆಲದಮರಕ್ಕೆ ಆತನನ್ನು ನೇಣು ಹಾಕಿ. ಜಮೀರ್ ಈ ದೇಶದಲ್ಲಿ ಇರಲು ಲಾಯಕ್ಕಿಲ್ಲ, ನಾಲಾಯಕ್ ಇದಿಯಾ ನೀನು. ಯಾರದ್ದು ಬೇಕು ಜಮೀನು, ಇಲ್ಲಿನ ಭೂಮಿ, ಕಟ್ಟಡ, ನುಂಗಿ ನೀರು ಕುಡಿಯೋಕೆ ನಿಮ್ಮ ಅಪ್ಪಂದ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.