ಉತ್ತರಪ್ರದೇಶದ ಮೀರತ್ ಜಿಲ್ಲೆಯ ಕಂಕರ್ ಖೇರಾದ ಸಂತ ನಗರ ಕಾಲೋನಿಯಲ್ಲಿ ನಾಯಿ ಮರಿಗಳ ಶಬ್ದ ಕೇಳೋಕಾಗದೇ ಇಬ್ಬರು ಮಹಿಳೆಯರು ಹಾಗೂ ಸಿಐಎಸ್ಎಫ್ ಸಿಬ್ಬಂದಿ ಸೇರಿ 5 ನಾಯಿ ಮರಿಗಳನ್ನು ಸಜೀವ ದಹನ ಮಾಡಿರುವ ಘಟನೆ ನಡೆದಿದೆ. ಕೃತ್ಯ ಎಸಗಿದ ಇಬ್ಬರು ಮಹಿಳೆಯರನ್ನು ಶೋಭಾ ಮತ್ತು ಆರತಿ ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ನಾಯಿಮರಿಗಳು ಬೊಗಳುತ್ತಿದ್ದು, ಅದನ್ನು ಸಹಿಸಲಾಗದೇ ಇದ್ದ ಜಾಗದಿಂದ ಕಳುಹಿಸಿದ್ದಾರೆ. ಅದಾದ ಮೂರು ದಿನಗಳ ಬಳಿಕ ಪೆಟ್ರೋಲ್ ಸುರಿದು ನಾಯಿಮರಿಗಳನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ.
ಸ್ಥಳೀಯರಿಗೆ ವಿಷಯದ ತಿಳಿದಿದ್ದು, ನಂತರ ಪೊಲೀಸರಿಗೆ ಗಮನಕ್ಕೆ ತಂದ್ದಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವಿಷಯ ತಿಳಿದ ಅನಿಮಲ್ಸ್ ಕೇರ್ ಸೊಸೈಟಿಯ ಕಾರ್ಯದರ್ಶಿ ಅಂಶುಮಾಲಿ ವಶಿಷ್ಠ ಪ್ರತಿಭಟನೆ ನಡೆಸಿದ್ದು, ಬಳಿಕ ಮಹಿಳೆಯರ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ಈ ಕುರಿತು ಅಂಶುಮಾಲಿ ವಶಿಷ್ಠ ಮಾತನಾಡಿ, ಈ ವಿಷಯವನ್ನು ಗುರುವಾರ ಎಸ್ಎಸ್ಪಿ ವಿಪಿನ್ ತಾಡಾ ಅವರ ಗಮನಕ್ಕೆ ತಂದಿದ್ದು, ತನಿಖೆಗೆ ಆದೇಶಿಸಿದ್ದರು.
ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಠಾಣೆಗೆ ತೆರಳಿ, ಇಬ್ಬರು ಮಹಿಳೆಯರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ನಂತರ ಎಫ್ಐಆರ್ ದಾಖಲಿಸಲಾಗಿದೆ. ಇನ್ನೂ ಎಸ್ಎಸ್ಪಿ ವಿಪಿನ್ ಟಾಡಾ ಮಾತನಾಡಿ, ಮಂಗಳವಾರ ಘಟನೆ ನಡೆದಿದ್ದು, ಗುರುವಾರ ಸ್ಥಳೀಯರಿಗೆ ತಿಳಿದಿದೆ. ಇಬ್ಬರು ಆರೋಪಿ ಮಹಿಳೆಯರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 325 ಅಡಿಯಲ್ಲಿ ಎಫ್ಐಆರ್ ದಾಖಲಿಸಿಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.