ಕಲಘಟಗಿ: ಪಟ್ಟಣದ ತಾಲೂಕು ದಂಡಾಧಿಕಾರಿ ಕಾರ್ಯಾಲಯದಲ್ಲಿ ಕೋಟೆ ನಾಡು ಚಿತ್ರದುರ್ಗದ ರಕ್ಷಣೆಗಾಗಿ ಒನಕೆಯನ್ನುಅಸ್ತ್ರವಾಗಿಟ್ಟುಕೊಂಡು ದಿಟ್ಟ ಹೋರಾಟಗಾರ್ತಿ, ಶೌರ್ಯ ಸಾಹಸಕ್ಕೆ ಹೆಸರಾಗಿದ್ದ ಕೆಚ್ಚೆದೆಯ ನಾರಿ ವೀರ ವನತೆ ಓಬವ್ವ ಜಯಂತಿಯನ್ನು ತಾಲೂಕು ದಂಡಾಧಿಕಾರಿ ವೀರೇಶ್ ಮುಳಗುಂದಮಠ ಪುಷ್ಪನಮನ ಸಲ್ಲಿಸುವ ಮುಖಾಂತರ ಆಚರಿಸಿದರು.
ಈ ಸಂದರ್ಭದಲ್ಲಿ ಗ್ರೇಡ್- ತಹಶೀಲ್ದಾರ್ ಬಸವರಾಜ್ ಹೊಂಕಣ್ಣದವರು, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಮಹೇಶ್ ಅಲಗೂರು, ವೈ ಜಿ ಭಗವತಿ, ತಾಲೂಕು ಕ ಸಾ ಪ. ಅಧ್ಯಕ್ಷ ರಮೇಶ್ ಸೋಲಾರಕೊಪ್ಪ, ಅನಿತಾ ನಾಯಕ್, ನಂದಿನಿ ಖಾನಾಪುರ್, ಮಂಜುನಾಥ ದನಿಗೊಂಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.