ತಮಿಳುನಾಡು: ಕಾಡನ್ನು ಬಿಟ್ಟ ಗಜಪಡೆ ನಾಡಿಗೆ ಲಗ್ಗೆ ಇಟ್ಟಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉಡೆದುರ್ಗಂ ಬಳಿ 20ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಿಗೆ ಅರಣ್ಯ ಅಧಿಕಾರಿಗಳಿಂದ ಎಚ್ಚರಿಕೆ ನೀಡಿದ್ದಾರೆ.
ಪ್ರತಿ ವರ್ಷವೂ ಅಕ್ಟೋಬರ್ ತಿಂಗಳಲ್ಲಿ ಕಾಡಾನೆಗಳು ಬರುವುದು ಸಾಮಾನ್ಯವಾಗಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಡೆಂಕಣಿಕೊಟೆ, ಶಾನಮಾವು, ಜವಳಗೆರೆ ಕೃಷ್ಣಗಿರಿ ಅರಣ್ಯ ಪ್ರದೇಶದ ಮೂಲಕ ಕಾಡಾನೆಗಳು ವಲಸೆ ಬರುತ್ತವೆ. ಕಳೆದ 15 ದಿನಗಳಿಂದಲೂ ಉಡೆದುರ್ಗ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಕರ್ನಾಟಕದಿಂದ ವಲಸೆ ಬಂದಿರುವ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಆಹಾರ ಅರಸಿ ಬರುವ ಆನೆಗಳು ಅರಣ್ಯದ ಸಮೀಪದಲ್ಲಿರುವ ಕೃಷಿ ಜಮೀನುಗಳಿಗೆ ನುಗ್ಗಿ ರಾಗಿ,ಟಮ್ಯಾಟೋ, ಬೀನ್ಸ್ನಂತಹ ಕೃಷಿ ಬೆಳೆಗಳನ್ನು ನಾಶಗೊಳಿಸಿವೆ.