ಶಿಗ್ಗಾವಿ:- ಉಪ ಚುನಾವಣೆ ಹಿನ್ನೆಲೆ, ಮತದಾನಕ್ಕೂ ಮುನ್ನ ಶಿಗ್ಗಾಂವಿಯಲ್ಲಿ “ಕೈ” ಅಭ್ಯರ್ಥಿಗೆ ಬಿಗ್ ಶಾಕ್ ಎದುರಾಗಿದ್ದು, ಚುನಾವಣಾ ಆಯುಕ್ತರಿಗೆ ಬಿಜೆಪಿ ದೂರು ಕೊಟ್ಟಿದೆ.ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ರೌಡಿ ಶೀಟ್ ಪ್ರಕರಣ ಇದೆ.
ಆದ್ರೆ, ಅವರು ನಾಮಪತ್ರದ ಅಫಡವಿಟ್ ನಲ್ಲಿ ತಮ್ಮ ವಿರುದ್ಧ ಯಾವುದೇ ಕೇಸ್ ಗಳಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಚುನಾವಣಾ ಏಜೆಂಟ್ ಎಸ್ ಕೆ ಅಕ್ಕಿ ಅವರು ಇ – ಮೇಲ್ ಮೂಲಕ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.
ಯಾಸೀರ್ ಖಾನ್ ಪಠಾಣ್ ಮೇಲೆ ರೌಡಿ ಶೀಟರ್ ಸ್ಟೇಟಸ್ ಇದೆ ಎಂದು ಹಾವೇರಿ ಎಸ್ ಪಿ ಹೇಳಿಕೆ ನೀಡಿದ್ದಾರೆ. ಆದ್ರೆ, ಪಠಾಣ್ ಅಫಡವಿಟ್ ನಲ್ಲಿ ತಮ್ಮ ವಿರುದ್ಧ ಯಾವುದೇ ಕೇಸ್ ಗಳಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಕಳೆದ ಚುನಾವಣೆ ವೇಳೆ ಅವರ ಮೇಲೆ ಹಲವು ಕೇಸ್ ಇದ್ದವು. ಆದರೆ ಆಶ್ಚರ್ಯ ಅಂದರೆ ಉಪ ಚುನಾವಣೆಗೆ ಸಲ್ಲಿಸಿರುವ ಅಪಡವಿಟ್ ನಲ್ಲಿ ಕೇಸ್ ಗಳು ಇಲ್ಲ ಎಂದಿದ್ದಾರೆ. ಹೀಗಾಗಿ ಈ ಬಗ್ಗೆ ವಿಸ್ತೃತ ತನಿಖೆ ಆಗಲಿ ಎಂದು ದೂರು ನೀಡಿದ್ದಾರೆ.
2023 ರ ಚುನಾವಣೆ ಸಂದರ್ಭದಲ್ಲಿ ಯಾಸೀರ್ ಖಾನ್ ಪಠಾಣ್ ಸಲ್ಲಿಸಿದ್ದ ಅಫಡವಿಟ್, ಈ ಬಾರಿ ಶಿಗ್ಗಾವಿ ಉಪಚುನಾವಣೆಗೆ ಕೈ ಅಭ್ಯರ್ಥಿಯಾಗಿ ಪಠಾಣ್ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದ ಅಫಿಡೆವಿಟ್ ಹಾಗೂ ಹಾವೇರಿ ಎಸ್ ಪಿ ಅಂಶುಕುಮಾರ್ ಸುದ್ದಿಗೋಷ್ಟಿಯಲ್ಲಿ ಪಠಾಣ್ ಮೇಲೆ ರೌಡಿ ಶೀಟರ್ ಇನ್ನೂ ಇದೆ ಎಂಬ ಹೇಳಿಕೆಯ ವಿಡಿಯೋ ಕ್ಲಿಪ್ಪಿಂಗ್ಸ್ ನೊಂದಿಗೆ ದೂರು ನೀಡಿದ್ದಾರೆ.
ಒಟ್ಟಾರೆ ಎಸ್ಪಿ ಅಂಶುಕುಮಾರ್ ಕೂಡ ಎರಡೆರಡು ಬಾರಿ ಗೊಂದಲದ ಹೇಳಿಕೆ ನೀಡಿದರು. ಇದೇ ಅಸ್ತ್ರವನ್ನು ಬಿಜೆಪಿ ಈಗ ಇಟ್ಟು ಕೊಂಡಿದೆ.