ಎಸ್.ಪಂಚರ್ ಆಗಿ ನಿಂತಿದ್ದ ಲಾರಿ ಮೇಲೆ ಆನೆ ದಾಳಿ ನಡೆಸಿ ಮುಸುಕಿನಜೋಳವನ್ನು ಒಂದು ತಾಸಿಗೂ ಹೆಚ್ಚು ಕಾಲ ಗುಳುಂ ಮಾಡಿರುವ ಕರ್ನಾಟಕ ಹಾಗೂ ತಮಿಳುನಾಡು ಗಡಿಯಾದ ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್ ಪೋಸ್ಟ್ ಸಮೀಪ ನಡೆದಿದೆ. ಮುಸುಕಿನಜೋಳ ತುಂಬಿಕೊಂಡು ತಮಿಳುನಾಡಿಗೆ ಸಾಗಿಸುತ್ತಿದ್ದ ಲಾರಿ ಪಂಚ್ಚರ್ ಆದ ಪರಿಣಾಮ ರಸ್ತೆಬದಿಯೇ ನಿಲ್ಲಿಸಿ ಮೆಕಾನಿಕ್ ಕರೆತರಲು ಚಾಲಕ ತೆರಳಿದ್ದ ವೇಳೆ ಲಗ್ಗೆ ಇಟ್ಟ ಸಲಗವೊಂದು ಜೋಳವನ್ನು ತಿಂದು ಬಿಸಾಕಿದೆ.
Video Player
00:00
00:19
ಇನ್ನು, ಆನೆ ಭೋಜನದ ಹಸಿವಿನಿಂದ ಒಂದು ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು ಬಳಿಕ ಅರಣ್ಯ ಇಲಾಖೆಯು ಕಾಡಿಗೆ ಆನೆಯನ್ನು ಅಟ್ಟಿದ್ದಾರೆ. ಇನ್ನು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.