ಬಹುನಿರೀಕ್ಷಿತ ಕೈಲಾಕ್ ಕಾರನ್ನು ಸ್ಕೋಡಾ ಕಂಪನಿಯು ಬಿಡುಗಡೆಗೊಳಿಸಿದೆ. ಕೈಲಾಕ್ ಕಾರಿನ ಬೆಲೆ ರೂ 7.89 ಲಕ್ಷದಿಂದ ಪ್ರಾರಂಭ. ಪರಿಚಯಾತ್ಮಕ ಬೆಲೆ, ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ). ಬುಕಿಂಗ್ಗಳು ಡಿಸೆಂಬರ್ 2, 2024 ರಿಂದ ಆರಂಭವಾಗುತ್ತಿದ್ದು, ಭಾರತ್ ಮೊಬಿಲಿಟಿ ಎಕ್ಸ್ಪೋ 2025 ದಲ್ಲಿ ಅದರ ಪ್ರದರ್ಶನದ ನಂತರ ಜನವರಿ 27, 2025 ರಿಂದ ಡೆಲಿವರಿ ಶುರುವಾಗುತ್ತದೆ.
ಸ್ಕೋಡಾ ಕೈಲಾಕ್ ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್ ಪ್ಲಸ್, ಮತ್ತು ಪ್ರೆಸ್ಟೀಜ್ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರಲಿದೆ.
ಕೈಲಾಕ್, ಕುಶಾಕ್ನಂತೆಯೇ ಸ್ಪ್ಲಿಟ್-ಎಲ್ಇಡಿ ಹೆಡ್ಲೈಟ್ ವಿನ್ಯಾಸವನ್ನು ಹೊಂದಿದೆ, ಎಲ್ಇಡಿಗಳು ಬಾನೆಟ್ ಲೈನ್ನ ಕೆಳಗೆ ಇದ್ದು, ಎಲ್ಇಡಿ ಪ್ರೊಜೆಕ್ಟರ್ ಹೆಡ್ಲೈಟ್ಗಳನ್ನು ಬಂಪರ್ನ ಮೇಲೆ ಇರಿಸಲಾಗಿದೆ. ಇದು ಇತರ ಸ್ಕೋಡಾ ಕಾರುಗಳಲ್ಲಿ ಕಂಡುಬರುವಂತೆ ಸಾಂಪ್ರದಾಯಿಕ ಚಿಟ್ಟೆ-ಆಕಾರದ ಗ್ರಿಲ್ ಹೊಂದಿದೆ. 17-ಇಂಚಿನ ಡ್ಯುಯಲ್-ಟೋನ್ ಅಲಾಯ್ ಚಕ್ರಗಳು ಮತ್ತು ORVM-ಮೌಂಟೆಡ್ ಟರ್ನ್ ಇಂಡಿಕೇಟರ್ಗಳನ್ನು ಕೈಲಾಕ್ ಹೊಂದಿದೆ.
ಕೈಲಾಕ್ನಲ್ಲಿ 2-ಸ್ಪೋಕ್ ಸ್ಟೇರಿಂಗ್ ವೀಲ್ ಮತ್ತು ಸೆಮಿ-ಲೆಥೆರೆಟ್ ಸೀಟ್ ಒದಗಿಸಿಲಾಗಿದೆ. ಇದು ಅಷ್ಟಭುಜಾಕೃತಿಯ AC ವೆಂಟ್ಗಳನ್ನು ಹೊಂದಿದೆ ಮತ್ತು ಮಧ್ಯದಲ್ಲಿರುವ AC ವೆಂಟ್ಗಳು ದೊಡ್ಡ ಟಚ್ಸ್ಕ್ರೀನ್ನ ಕೆಳಗೆ ಇದೆ. ಸೆಂಟ್ರಲ್ ಎಸಿ ವೆಂಟ್ಗಳ ಕೆಳಗೆ, ಹವಾಮಾನ ನಿಯಂತ್ರಣ ಪ್ಯಾನೆಲ್ ಇದ್ದು ಕುಶಾಕ್ನಿಂದ ಎರವಲು ಪಡೆಯಲಾಗಿದೆ.
10.1-ಇಂಚಿನ ಟಚ್ಸ್ಕ್ರೀನ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೈರ್ಲೆಸ್ ಫೋನ್ ಚಾರ್ಜರ್, ಸಿಂಗಲ್-ಪೇನ್ ಸನ್ರೂಫ್ ಕೈಲಾಕ್ ಕಾರಿನಲ್ಲಿದೆ.
ಸುರಕ್ಷತೆಯ ವಿಷಯದಲ್ಲಿ, ಇದು ಆರು ಏರ್ಬ್ಯಾಗ್ಗಳನ್ನು (ಸ್ಟ್ಯಾಂಡರ್ಡ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟ್ರಾಕ್ಷನ್ ಕಂಟ್ರೋಲ್ ಮತ್ತು ಮಲ್ಟಿ ಕೊಲಿಶನ್ ಬ್ರೇಕಿಂಗ್ ಸಿಸ್ಟಮ್ ಅನ್ನು ಕೈಲಾಕ್ ಹೊಂದಿದೆ.
ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಲ್ಲಿ ಇರುವಂತೆ ಕೈಲಾಕ್ನಲ್ಲೂ ಸಹ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (115 PS/178 Nm) ಹೊಂದಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಿವೆ.
ಸ್ಕೋಡಾ ಇನ್ನೂ ಕೈಲಾಕ್ನ ಸಂಪೂರ್ಣ ಬೆಲೆ ಪಟ್ಟಿಯನ್ನು ಬಹಿರಂಗಪಡಿಸಿಲ್ಲ, ಆದರೆ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025 ಸಮಯದಲ್ಲಿ ಬೆಲೆ ಪಟ್ಟಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಕೈಲಾಕ್ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರ XUV 3XO, ರೆನೋ ಕೈಗರ್, ಟೊಯೋಟಾ ಟೈಸರ್ ಮತ್ತು ಮಾರುತಿ ಫ್ರಾಂಕ್ಸ್ ಕಾರುಗಳಿಗೆ ಸ್ಪರ್ಧೆ ಒಡ್ಡಲಿದೆ.