ಹಾವೇರಿ:- ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ಇಂದು ಉಪ ಚುನಾವಣೆ ನಡೆಯುತ್ತಿದೆ. ಹೀಗಾಗಲೇ ಶಿಗ್ಗಾವಿಯಲ್ಲಿ ಉಪಚುನಾವಣೆಯ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ.
ಮತಗಟ್ಟೆ 99 ರಲ್ಲಿ ಹಣ್ಣು ಕಾಯಿ ಒಡೆದು ಪೂಜೆ ಸಲ್ಲಿಸುವ ಮತದಾನ ಆರಂಭ ಮಾಡಲಾಗಿದೆ. ಖಾಜೇಖಾನ್ ಓಣಿಯ ನಿವಾಸಿ ತಿರಕಪ್ಪ ಚಾಕಾಪುರ ಅವರಿಂದ ಪೂಜೆ ನೆರವೇರಿದೆ.
ಬೂತ್ ನಂಬರ್ 99 ಹಾಲುಮತ ಸಮಾಜಕ್ಕೆ ಸೇರಿದ ವ್ಯಕ್ತಿಯಿಂದ ಮತದಾನ ಆರಂಭವಾಗಿದೆ.
ಕುರುಬರ ಬೋಣಿಗೆ ಎಂಬ ಗಾಧೇ ಮಾತಿನಂತೆ ಮೊದಲ ಮತ ಕುರುಬರಿಂದ ಆರಂಭವಾಗಿದೆ. *
ಮತದಾನ ಪ್ರಕ್ರಿಯೆ ಆರಂಭ ಹಿನ್ನೆಲೆ ಸರತಿ ಸಾಲಿನಲ್ಲಿ ತಮ್ಮ ಹಕ್ಕು ಚಲಾಯಿಸಲು ಮತದಾರರು ನಿಂತಿದ್ದಾರೆ. ಮತದಾನ ಪ್ರಕ್ರಿಯೆ ಆರಂಭ ಆಗುತ್ತಿದಂತೆ ಮತಗಟ್ಟೆಗಳತ್ತ ಮತದಾರರು ಆಗಮಿಸುತ್ತಿದ್ದಾರೆ.
ಉಪ ಚುನಾವಣೆ ಮತದಾನ ಮತದಾನದ ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ಹಾವೇರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮತಗಟ್ಟೆಗಳಲ್ಲಿನ ಭದ್ರತೆ ವೀಕ್ಷಣೆ ಮಾಡಿದ್ದಾರೆ.