ದಿನಾ ಮನೆಯನ್ನು ಗುಡಿಸಿ, ಒರೆಸಿ, ಸ್ವಚ್ಛವಾಗಿ ಇಟ್ಟುಕೊಂಡರೂ ಕೂಡ, ಜಿರಳೆ, ಸೊಳ್ಳೆ ಹಾಗೂ ಇರುವೆಗಳ ಕಾಟವನ್ನು ಮಾತ್ರ ತಡೆಯಲು ಸಾಧ್ಯವಿಲ್ಲ! ಇವು ಮೂವರೂ ಕೂಡ ಮನೆಗೆ ಕರೆಯದೇ ಬರುವ ಅತಿಥಿಗಳು! ಯಾವ ಸಮಯದಲ್ಲಿ ಹೇಗೆ ಮನೆಯೊಳಗೆ ಬಂದು ಬಿಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ!
ಮನೆಯೊಳಗೆ ಬರದೇ ಇರುವ ಹಾಗೆ, ಸೊಳ್ಳೆ ಬತ್ತಿ ಹಚ್ಚಿದರೂ, ಲಕ್ಷ್ಮಣ ರೇಖೆ ಎಳೆದರೂ, ಅಥವಾ ಕೆಲವೊಂದು ರಾಸಾಯನಿಕ ಅಂಶ ಇರುವ ಸ್ಪ್ರೇ ಅನ್ನು ಮನೆಯ ಮೂಲೆ-ಮೂಲೆಗೆ ಹಾಕಿ ದರೂ ಕೂಡ,
ಯಾವುದಾದರೂ ಒಂದು ಮೂಲೆಯಿಂದ, ಇವುಗಳು ಮನೆಯ ಒಳಗೆ ಎಂಟ್ರಿ ಕೊಡುತ್ತವೆ! ಅದರಲ್ಲೂ ಈ ಜಿರಳೆ ಹಾಗು ಇರುವೆಗಳ ಕಾಟ ಕೇಳುವುದೇ ಬೇಡ! ಮನೆಯ ಸದಸ್ಯರಂತೆ ಅತ್ತಿಂದಿತ್ತ ಓಡಾಡುತ್ತಲೇ ಇರುತ್ತವೆ! ಹಾಗಾದ್ರೆ ನಿಮ್ಮ ಮನೆಯಲ್ಲೂ ಇವುಗಳ ಕಾಟ ಜಾಸ್ತಿ ಆಗಿದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್, ನೀವೂ ಒಮ್ಮೆ ಟ್ರೈ ಮಾಡಿ ನೋಡಿ.
ಸೀಮೆ ಎಣ್ಣೆಯನ್ನು ಬಳಕೆ ಮಾಡಿ ನಿಮ್ಮ ಅಡುಗೆಮನೆಯಲ್ಲಿ ಸಾಕಷ್ಟು ಜಿರಳೆಗಳಿದ್ದರೆ, ಸೀಮೆಎಣ್ಣೆಯನ್ನು ಸಿಂಪಡಸಿ, ಅದನ್ನು ಬಳಸುವ ಮೊದಲು ಜಿರಳೆಗಳ ಕುರುಹುಗಳಿರುವ ಸ್ಥಳಗಳನ್ನು ಮೊದಲು ಗುರುತಿಸಿ. ಇದರ ನಂತರ, ಈ ಸ್ಥಳಗಳಲ್ಲಿ ಸೀಮೆಎಣ್ಣೆ ಸಿಂಪಡಿಸಿ. ಸೀಮೆ ಎಣ್ಣೆಯ ವಾಸನೆಗೆ ಜಿರಳೆಗಳು ಓಡಿಹೋಗುತ್ತವೆ.
ಬೇವಿನ ಎಲೆ ಬೇವಿನ ಎಲೆಗಳಿಂದ ಅನೇಕ ಚರ್ಮರೋಗಗಳನ್ನು ಗುಣಪಡಿಸಬಹುದು, ಹಾಗೆಯೇ ಜಿರಳೆಗಳನ್ನು ಓಡಿಸಲು ಕೂಡ ಇದು ಉತ್ತಮ ವಿಧಾನವಾಗಿದೆ. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ, ಎಲೆಗಳನ್ನು ಈ ನೀರನ್ನು ಜಿರಳೆ ಇರುವ ಜಾಗಗಳಲ್ಲಿ ಸಿಂಪಡಿಸಿ. ಜಿರಳೆಗಳು ಅದರಿಂದ ಓಡಿಹೋಗುತ್ತವೆ. ಅಡುಗೆ ಸೋಡಾ ತುಂಬಾ ಪರಿಣಾಮಕಾರಿ ಜಿರಳೆಗಳನ್ನು ಹೋಗಲಾಡಿಸಲು ಅಡುಗೆ ಸೋಡಾ ಕೂಡ ಒಳ್ಳೆಯದು. ಇದಕ್ಕಾಗಿ ಬೇಕಿಂಗ್ ಸೋಡಾದಲ್ಲಿ ಸಕ್ಕರೆಯನ್ನು ಬೆರೆಸಿ ಮಿಶ್ರಣ ಮಾಡಿ. ಅದರ ನಂತರ ಅದನ್ನು ಜಿರಳೆ ಇರುವ ಸ್ಥಳದಲ್ಲಿ ಸಿಂಪಡಿಸಿ. ಇದು ಜಿರಳೆಗಳನ್ನು ಕೊಲ್ಲಬಲ್ಲದು.
ಈ ಸ್ಪ್ರೇ ಬಳಸಿ ಮನೆಯಲ್ಲಿ ಜಿರಳೆ, ನೊಣ-ಸೊಳ್ಳೆಗಳನ್ನು ಹೋಗಲಾಡಿಸಲು ಸ್ಪ್ರೇ ಮಾಡಬೇಕು. ಇದನ್ನು ಮಾಡಲು, ನೀವು ನೀರಿನ ಪಾತ್ರೆಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಬೆಳ್ಳುಳ್ಳಿ ಸಿಪ್ಪೆಗಳು, ಮೆಣಸಿನಕಾಯಿ, ಅಲೋವೆರಾ ಎಲೆಗಳನ್ನು ಮುರು ದಿನಗಳ ವರೆಗೆ ಮುಚ್ಚಿಡಬೇಕು, ಬಳಿಕ ಅದನ್ನು ಸೋಸಿ ಸ್ಪ್ರೇ ಮಾಡಬೇಕು.
ಸಿಂಪಡಿಸುವಾಗ, ಅದು ಕೆಟ್ಟ ವಾಸನೆ ಎಂಬುದನ್ನು ನೆನಪಿಡಿ. ಆದ್ದರಿಂದ, ಆ ಪಾತ್ರೆಯನ್ನು ಅಡುಗೆಮನೆಯಲ್ಲಿ ಅಥವಾ ನಿಮ್ಮ ಮಲಗುವ ಕೋಣೆಯಲ್ಲಿ ಇಡಬೇಡಿ. ಬದಲಿಗೆ, ಕುಟುಂಬದ ಸದಸ್ಯರ ಚಲನವಲನ ಕಡಿಮೆ ಇರುವ ಸ್ಥಳದಲ್ಲಿ ಪಾತ್ರೆಯನ್ನು ಇರಿಸಿ. ಹೀಗೆ ಸಿಂಪಡಿಸಿ..
ಎರಡರಿಂದ ಮೂರು ಬಾರಿ ಸಿಂಪಡಿಸಬೇಕು. ತೇವ ಪ್ರದೇಶಗಳು ಅಥವಾ ನಿಂತಿರುವ ನೀರಿನ ಬಳಿ ಈ ಸ್ಪ್ರೇ ಅನ್ನು ಸಿಂಪಡಿಸಿ. ಹಾಸಿಗೆಗಳ ಕೆಳಗೆ ಮತ್ತು ಪೆಟ್ಟಿಗೆಗಳ ಹಿಂದೆ ಸಿಂಪಡಿಸುವುದು ಸಹ ಪ್ರಯೋಜನಕಾರಿಯಾಗಿದೆ. ಇದರಿಂದ ಸೊಳ್ಳೆ, ನೊಣಗಳ ಕಾಟ ತಪ್ಪಿಸುತ್ತದೆ, ಮನೆ ರೋಗಾಣು ಮುಕ್ತವಾಗುತ್ತದೆ.