ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದ ಹನ್ನೆರಡು ಸಾವಿರ ಮಠದಲ್ಲಿ ನಿನ್ನೆ ಬುಧವಾರ ಆಮ ಆದ್ಮಿ ಪಕ್ಷದ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ರವರು ಆಗಮಿಸಿದ್ದು ಮಠದಲ್ಲಿ ಚಪ್ಪಲಿ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಠಕ್ಕೆ ಅವಮಾನ ಮಾಡಿದಂತಾಗಿದೆ.
ಈ ಮಠದಲ್ಲಿ ಇದುವರೆಗೂ ಎಂತಹ ಗಣ್ಯ ವೆಕ್ತಿಗಳು ಆಗಮಿಸಿದ್ದರು ಚಪ್ಪಲಿಯನ್ನು ಹೊರಗಡೆ ಬಿಟ್ಟು ಬರುವುದು ಪದ್ದತಿ ಆದರೆ ಆಮ ಆದ್ಮಿ ಪಕ್ಷದ ಕಾರ್ಯಕ್ರಮದಲ್ಲಿ ಈ ರೀತಿ ಮಠದಲ್ಲಿ ಚಪ್ಪಲಿ ಧರಿಸಿಕೊಂಡು ಬಂದಿರುವುದನ್ನು ತಾಲೂಕಿನ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ರೀತಿ ಘಟನೆ ನಡೆದರು ಇದರ ಬಗ್ಗೆ ಮಠದ ಆಡಳಿತ ಮಂಡಳಿ ಗಮನ ಹರಿಸದೆ ಇರುವುದು ವಿಪರ್ಯಾಸವಾಗಿದೆ.