‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್ ಸೀಸನ್ 9’ರ ಮೂಲಕ ಖ್ಯಾತಿ ಘಳಿಸಿದ ನಟಿ ನೇಹಾ ಗೌಡ ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ನ.14 ಮಕ್ಕಳ ದಿನಾಚರಣೆ ಪ್ರಯುಕ್ತ ಮಗಳ ಸುಂದರ ಫೋಟೋವನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಮಕ್ಕಳ ದಿನಾಚರಣೆಯಂದು ನಮ್ಮ ಪುಟ್ಟ ಮಗುವಿನ ಫೋಟೋ ಹಂಚಿಕೊಳ್ಳುತ್ತಿರೋದಕ್ಕೆ ಖುಷಿಯಿದೆ. ನಮ್ಮ ಜೀವನದಲ್ಲಿ ಮಗಳ ಆಗಮನವಾಗಿರೋದು ಖುಷಿಯಿದೆ ಎಂದು ಮುದ್ದು ಮಗಳ ಫೋಟೋ ಶೇರ್ ಮಾಡಿ ನೇಹಾ ಸಂಭ್ರಮಿಸಿದ್ದಾರೆ. ಅಂದಹಾಗೆ, ಅ.29ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಸದ್ಯಕ್ಕೆ ನೇಹಾ ಗೌಡ ನಟನೆಯಿಂದ ದೂರ ಉಳಿದಿದ್ದು ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.
ಅಕ್ಟೋಬರ್ 29ರಂದು ನೇಹಾ ಗೌಡ, ಚೊಚ್ಚಲ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ನೇಹಾ ಹಾಗೂ ಅವರ ಪತಿ ಚಂದನ್ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಕ್ಟೋಬರ್ 29, 2024 ರಂದು ನಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ. ನಾವು ತುಂಬಾ ಸಂತೋಷವಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು. ತಾಯಿ ಮತ್ತು ನಮ್ಮ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ, ಸಂತೋಷದಿಂದ ಇದ್ದಾರೆ ಎಂಬ ಬರೆದುಕೊಂಡಿದ್ದರು.