ಬೆಂಗಳೂರು:- ಇತ್ತೀಚೆಗೆ ನಗರದ ಪ್ರತಿಷ್ಟಿತ ಮಾಲ್ ಗಳ ವರ್ತನೆ ಯಾಕೋ ಗ್ರಾಹಕರಿಗೆ ಹಾಗೂ ನೆಟ್ಟಿಗರಿಗೆ ಭಾರೀ ಹಿಂಸೆ ಕೊಡುತ್ತಿದೆ.
ಮೊದಲೆಲ್ಲಾ ಜಿಟಿ ಮಾಲ್.. ಇವತ್ತು ಮಂತ್ರಿ ಮಾಲ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಲಿಫ್ಟ್ ಒಳಗಡೆ ಫುಡ್ ಡೆಲಿವರಿ ಬಾಯ್ ಬಿಡದೆ ಮಾಲ್ ಸಿಬ್ಬಂದಿ ಅವಮಾನ ಮಾಡಿದ್ದಾರೆ.
ಪಂಚೆ ತೊಟ್ಟ ರೈತನಿಗೆ ಮಾಲ್ ಒಳಗಡೆ ಬಿಡದ ಪ್ರಕರಣ ಮಾಸೋ ಮುನ್ನ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಂತ್ರಿ ಮಾಲ್ ವಿರುದ್ಧ ವ್ಯಾಪಕ ಆಕ್ರೋಶ ಶುರುವಾಗಿದೆ.
ಅಂದು ಪಂಚೆ ತೊಟ್ಟು ಬಂದ ರೈತನನ್ನ ಒಳ ಬಿಡದೇ ಅವಮಾನ ಮಾಡಲಾಗಿತ್ತು. ಇಂದು ಡೆಲಿವರಿ ಹುಡುಗರಿಗೆ ಅಪಮಾನ ಮಾಡಿದೆ ಅಂತ ಜನ ಕೆಂಡಕಾರಿದ್ದಾರೆ. ಡೆಲಿವರಿ ಹುಡುಗರು ಲಿಫ್ಟ್ ಒಳ ಬಂದ್ರೆ ನಿಮ್ಮ ಮಾಲ್ ನ ಘನತೆ ಹಾಳಾಗುತ್ತದೆಯೇ ಅಂತ ಕಿಡಿಕಾರಿದ್ದಾರೆ.
ಮಂತ್ರಿಮಾಲ್- ಕಂತ್ರಿಮಾಲ್ ಅಂತ ನೆಟ್ಟಿಗರು ಅಭಿಯಾನ ಆರಂಭ ಮಾಡಿದ್ದಾರೆ.