‘ಹವಾಮಾನ ಆಧರಿತ ಆರ್ಥಿಕ ಹಾನಿ ತಡೆಯಲು ಮಾಲಿನ್ಯಕ್ಕೆ ತ್ವರಿತ ನಿಯಂತ್ರಣ ಹೇರಬೇಕು’ ಎಂದು ಈ ವೇಳೆ ಜಿ-20 ರಾಷ್ಟ್ರಗಳ ಮುಖ್ಯಸ್ಥರಿಗೆ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಸೈಮನ್ ಸ್ಟಿಯಲ್ ಆಗ್ರಹಿಸಿದ್ದಾರೆ.
‘ಹವಾಮಾನ ಬದಲಾವಣೆ ತಡೆಗೆ ಕೈಗೊಂಡಿರುವ ನಿರ್ಧಾರಗಳು ‘ಜಿ-20 ರಾಷ್ಟ್ರಗಳ ಆರ್ಥಿಕತೆ ಸ್ವಯಂರಕ್ಷಣೆ’ ಕ್ರಮಗಳೇ ಆಗಿವೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
ತಾಪಮಾನ ಬದಲಾವಣೆ ಕುರಿತಂತೆ ಅಜೈರ್ಬೈಜಾನ್ನ ರಾಜಧಾನಿ ಬಾಕುವಿನಲ್ಲಿ ನಡೆದ ‘ಸಿಒಪಿ29’ ಶೃಂಗಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.
‘ಹವಾಮಾನ ಬದಲಾವಣೆ ತಡೆಗೆ ಜಿ-20 ರಾಷ್ಟ್ರಗಳೂ ಪರಿಹಾರ ಕಂಡುಕೊಳ್ಳಬೇಕು. ಒಂದು ರಾಷ್ಟ್ರ, ಕೆಲವೇ ರಾಷ್ಟ್ರಗಳಿಂದ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ. ಹೀಗಾಗಿ, ಮುಂದಿನ ವಾರ ರಿಯೊದಲ್ಲಿ ನಡೆಯುವ ಶೃಂಗಸಭೆಯಲ್ಲಿ ಜಾಗತಿಕ ತಾಪಮಾನ ಬದಲಾವಣೆ ವಿಷಯವೇ ಮೊದಲ ಆದ್ಯತೆಯಾಗಿರಬೇಕು’ ಎಂದು ಒತ್ತಿ ಹೇಳಿದರು.
ನವೆಂಬರ್ 18-19ರಂದು ಜಿ-20 ಸಮಾವೇಶವು ಬ್ರೆಜಿಲ್ನ ರಿಯೊ ಡ- ಜನೈರೊದಲ್ಲಿ ನಡೆಯಲಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿ ಹಲವು ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.