ಮುಂಬೈ: ಕ್ರಿಕೆಟ್ (Cricket) ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿಯು ಮಾರ್ಚ್ 31 ರಿಂದ ಆರಂಭಗೊಳ್ಳಲಿದ್ದು, ಕಳೆದ ಆವೃತ್ತಿಯಂತೆ ಈ ಬಾರಿಯೂ ಒಟ್ಟು 10 ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾದಾಟ ನಡೆಸಲಿವೆ.
ಮಾರ್ಚ್ 31 ರಿಂದ ಮೇ 21ರ ವರೆಗೆ ಲೀಗ್ ಹಂತದಲ್ಲಿ 18 ಡಬಲ್ ಹೆಡರ್ ಸೇರಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ. ಕೊನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶಿಸಲಿವೆ.
ಐಪಿಎಲ್ 2023 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (Gujarat Titans) ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ. ಮೇ 23-26ರ ವರೆಗೆ ಪ್ಲೇ-ಆಫ್ ಪಂದ್ಯಗಳು ನಡೆಯಲಿದ್ದು, ಮೇ 28ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಎಲ್ಲೆಲ್ಲಿ ಪಂದ್ಯಗಳು ?
ಈ ಬಾರಿ ಅಹಮದಾಬಾದ್, ಮೊಹಾಲಿ, ಲಖನೌ, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತ್ತಾ, ಜೈಪುರ, ಮುಂಬೈ, ಗುವಾಹಟಿ ಮತ್ತು ಧರ್ಮಶಾಲಾ ಸ್ಟೇಡಿಯಂ ಸೇರಿದಂತೆ ಒಟ್ಟು ದೇಶದ 12 ಸ್ಟೇಡಿಯಂಗಳಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ.
ಐಪಿಎಲ್ ತಂಡಗಳ ಪ್ಲೇಯಿಂಗ್ – 11 ಹೀಗಿದೆ:
- ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):ಫಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೇನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಜಾಶ್ ಹೇಝಲ್ವುಡ್, ಮೊಹಮ್ಮದ್ ಸಿರಾಜ್.
2. ಸನ್ರೈಸರ್ಸ್ ಹೈದರಾಬಾದ್ (SRH):ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್ (ನಾಯಕ), ಹ್ಯಾರಿ ಬ್ರೂಕ್, ಗ್ಲೇನ್ ಫಿಲಿಪ್ಸ್, ಮಾರ್ಕೊ ಯೆನ್ಸನ್, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್. - ರಾಜಸ್ಥಾನ್ ರಾಯಲ್ಸ್ (RR):ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮಾಯರ್, ಜೇಸನ್ ಹೋಲ್ಡರ್, ಆರ್.ಅಶ್ವಿನ್, ಟ್ರೆಂಟ್ ಬೋಲ್ಟ್, ಕುಲ್ದೀಪ್ ಸೇನ್, ಯುಜುವೇಂದ್ರ ಚಾಹಲ್.
- ಡೆಲ್ಲಿ ಕ್ಯಾಪಿಟಲ್ಸ್ (DC):ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ಮನೀಷ್ ಪಾಂಡೆ, ಸರ್ಫರಾಝ್ ಖಾನ್, ರೊವ್ಮನ್ ಪೊವೆಲ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಏನ್ರಿಕ್ ನೊರ್ಕಿಯಾ, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್.
- ಲಖನೌ ಸೂಪರ್ ಜೈಂಟ್ಸ್ (LSG):ಕೆ.ಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೀಪಕ್ ಹೂಡ, ಮನನ್ ವೋಹ್ರ, ನಿಕೋಲಸ್ ಪೂರನ್, ಮಾರ್ಕಸ್ ಸ್ಟೋಯ್ನಿಸ್, ಕೃಣಾಲ್ ಪಾಂಡ್ಯ, ರವಿ ಬಿಷ್ಣೋಯ್, ಜಯದೇವ್ ಉನಾದ್ಕಟ್, ಆವೇಶ್ ಖಾನ್, ಮಾರ್ಕ್ವುಡ್
- ಕೋಲ್ಕತಾ ನೈಟ್ ರೈಡರ್ಸ್(KKR):ವೆಂಕಟೇಶ್ ಅಯ್ಯರ್, ರೆಹಮಾನುಲ್ಹಾ ಗರ್ಬಾಝ್, ಎನ್. ಜಗದೀಸನ್, ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದುಲ್ ಠಾಕೂರ್, ಸುನೀಲ್ ನರೇನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಲಾಕಿ ಫರ್ಗ್ಯೂಸನ್.
- ಪಂಜಾಬ್ ಕಿಂಗ್ಸ್(PBKS):ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್, ಭಾನುಕ ರಾಜಪಕ್ಷ, ಲಿಯಾಮ್ ಲಿವಿಂಗ್ಸ್ಟೋನ್, ಶಾರುಖ್ ಖಾನ್, ಜಿತೇಸ್ ಶರ್ಮಾ, ಸ್ಯಾಮ್ ಕರನ್, ಕಗಿಸೊ ರಬಾಡ, ರಾಹುಲ್ ಚಹಾರ್, ಅರ್ಷ್ದೀಪ್ ಸಿಂಗ್, ವಿದ್ವತ್ ಕಾವೇರಪ್ಪ.
- ಗುಜರಾತ್ ಟೈಟಾನ್ಸ್ (GT):ಶುಭಮನ್ ಗಿಲ್, ವೃದ್ದಿಮಾನ್ ಸಹಾ, ಕೇನ್ ವಿಲಿಯಮ್ಸನ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಶಿವಂ ಮಾವಿ, ಅಲ್ಝಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಳ್.
- ಚೆನ್ನೈ ಸೂಪರ್ ಕಿಂಗ್ಸ್ (CSK):ಋತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಶಿವಂ ದುಬೆ, ಅಂಬಾಟಿ ರಾಯುಡು, ಎಂ.ಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಸಿಮ್ರಾನ್ಜೀತ್ ಸಿಂಗ್, ಮಹೇಶ್ ತೀಕ್ಷಣ
- ಮುಂಬೈ ಇಂಡಿಯನ್ಸ್(MI):ಇಶಾನ್ ಕಿಶನ್, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್, ಹೃತಿಕ್ ಶೋಕಿನ್, ಜೋಫ್ರಾ ಆರ್ಚರ್, ಕುಮಾರ ಕಾರ್ತಿಕೇಯ, ಜೆಸನ್ ಬೆಹ್ರನ್ಡ್ರಾಫ್, ಅರ್ಷದ್ ಖಾನ್.