ಎ ಆರ್ ರೆಹಮಾನ್ ಹಾಗೂ ಪತ್ನಿ ಸೈರಾ ಬಾನು ಏಕಾಏಕಿ ಡಿವೋರ್ಸ್ ಘೋಷಿಸಿ ಪ್ರತಿಯೊಬ್ಬರಿಗೂ ಶಾಕ್ ನೀಡಿದ್ದಾರೆ. 29 ವರ್ಷಗಳ ದಾಂಪತ್ಯ ಜೀವನಕ್ಕೆ ಜೋಡಿ ಕೊನೆ ಹಾಡಿದ್ದಾರೆ. ಬೇರೆ ಬೇರೆಯಾಗುತ್ತಿರುವ ಬಗ್ಗೆ ಆಗುವ ರೆಹಮಾನ್ ಹಾಗೂ ಸೈರಾ ತಿಳಿಸಿದ್ದಾರೆ. ಈ ಮಧ್ಯೆ ರೆಹಮಾನ್ ಅವರ ಹಳೆಯ ಸಂದರ್ಶನ ಒಂದು ವೈರಲ್ ಆಗಿದೆ.
ಸುಮಾರು ಮೂರು ದಶಕಗಳ ಕಾಲ ಸಂಸಾರ ನಡೆಸಿದ್ದ ರೆಹಮಾನ್ ಹಾಗೂ ಸೈರಾ ಮಧ್ಯೆ ಪ್ರೀತಿ ಹಾಗೂ ಹೊಂದಾಣಿಕೆ ಇತ್ತು. ಆದರೆ, ಈ ಹೊಂದಾಣಿಕೆ ಈಗ ಮುರಿದಿದೆ. ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ.
‘1994ರಲ್ಲಿ ನಾನು ಸುಮಾರು ಇಪ್ಪತ್ತೇಳು ವರ್ಷದವನಾಗಿದ್ದೆ. ನಾನು ಮದುವೆಯಾಗಲು ನಿರ್ಧರಿಸಿದೆ. ನನಗೆ ವಯಸ್ಸಾಯಿತು ಎಂದು ಅನಿಸುತ್ತಿತ್ತು. ನಾನು ಯಾವಾಗಲೂ ತುಂಬಾ ನಾಚಿಕೆಪಡುತ್ತಿದ್ದೆ ಮತ್ತು ಹುಡುಗಿಯರೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ನಾವು ಕೆಲಸ ಮಾಡುವಾಗ ನನ್ನ ಸ್ಟುಡಿಯೋದಲ್ಲಿ ನಾನು ಅನೇಕ ಯುವ ಮಹಿಳಾ ಗಾಯಿಕಿಯಕರನ್ನು ಭೇಟಿಯಾದೆ. ಅವರ ಬಗ್ಗೆ ನನಗೆ ಅಪಾರ ಗೌರವವಿತ್ತು. ಅಲ್ಲಿ ಇದ್ದ ಯಾರನ್ನೂ ಮದುವೆ ಆಗಬೇಕು ಎಂಬ ದೃಷ್ಟಿಯಿಂದ ನೋಡಿಲ್ಲ. ಹುಡುಗಿಯರ ಬಗ್ಗೆ ಯೋಚಿಸಲು ನನಗೆ ಸಮಯವಿರಲಿಲ್ಲ. ನಾನು ಹಗಲಿರುಳು ಕೆಲಸ ಮಾಡುತ್ತಿದ್ದೆ’ ಎಂದಿದ್ದರು ರೆಹಮಾನ್.
‘ಅವಳು ಸುಂದರ ಮತ್ತು ಸೌಮ್ಯವಾಗಿದ್ದಳು. ನಾವು ಮೊದಲ ಬಾರಿಗೆ 6 ಜನವರಿ 1995ರಂದು ನನ್ನ ಇಪ್ಪತ್ತೆಂಟನೇ ಹುಟ್ಟುಹಬ್ಬದಂದು ಭೇಟಿಯಾದೆವು. ಆ ಬಳಿಕ ನಾವು ಹೆಚ್ಚಾಗಿ ಫೋನ್ನಲ್ಲಿ ಮಾತನಾಡುತ್ತಿದ್ದೆವು. ನನ್ನನ್ನು ಮದುವೆಯಾಗಲು ಬಯಸುತ್ತೀರಾ ಎಂದು ನಾನು ಅವಳನ್ನು ಇಂಗ್ಲಿಷ್ನಲ್ಲಿ ಕೇಳಿದ್ದೆ. ಆ ದಿನಗಳಲ್ಲಿ ಸಾಯಿರಾ ತುಂಬಾ ಶಾಂತವಾಗಿದ್ದಳು. ಈಗಲೂ ಅವಳು ಸುಮ್ಮನಿರುತ್ತಾಳೆ’ ಎಂದಿದ್ದರು ರೆಹಮಾನ್.
ರೆಹಮಾನ್ ಹಾಗೂ ಸೈರಾ 1995ರ ಮಾರ್ಚ್ 12ರಂದು ಮದುವೆ ಆದರು. ಬಹುತೇಕ ಮೂರು ದಶಕಗಳ ಕಾಲ ಹೊಂದಾಣಿಕೆಯಿಂದ ಸಂಸಾರ ಮಾಡಿದ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು ಹೀಗೆ ಏಕಾಏಕಿ ವಿಚ್ಛೇದನ ಘೋಷಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ಗಾಯಕನಾಗಿಯೂ ಎ.ಆರ್. ರೆಹಮಾನ್ ಅವರಿಗೆ ಬೇಡಿಕೆ ಇದೆ. ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಯ ಸಿನಿಮಾಗಳಿಗೆ ರೆಹಮಾನ್ ಬ್ಯುಸಿಯಾಗಿದ್ದಾರೆ.