ಆಫ್ರಿಕಾದ ಬಡದೇಶಗಳಲ್ಲೊಂದಾದ ಕಾಂಗೋದಲ್ಲಿ ಪರ್ವತದ ಭಾಗವೊಂದು ಕುಸಿದು ಬಿದ್ದಿದೆ. ಈ ವೇಳೆ ಪ್ರತಿಯೊಬ್ಬರಿಗೂ ಅಚ್ಚರಿ ಕಾದಿದ್ದು ಕುಸಿದ ಬಿದ್ದ ಪರ್ವದಲ್ಲಿ ಭಾರೀ ಪ್ರಮಾಣದ ತಾಮ್ರದ ನಿಕ್ಷೇಪ ಪತ್ತೆಯಾಗಿದೆ.
ಪರ್ವತ ಕುಸಿಯುರುವ ವಿಡಿಯೋ ವೈರಲ್ ಆಗಿದ್ದು, ಇಷ್ಟೊಂದು ತಾಮ್ರ ಇದ್ದರೂ ಕಾಂಗೋ ಬಡ ದೇಶವಾಗಿಯೇ ಉಳಿದುಕೊಂಡಿರುವುದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ನಿಕ್ಷೇಪದ ವಿಚಾರದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಮಧ್ಯಪ್ರವೇಶ ಮಾಡಬಾರದು ಎಂದು ಹಲವರು ಒತ್ತಾಯಿಸಿದ್ದಾರೆ.
ಕಾಂಗೋ ದೇಶ ತನ್ನಲ್ಲಿರುವ ನೈಸರ್ಗಿಕ ಸಂಪನ್ಮೂಲದಿಂದಲೇ ಖ್ಯಾತಿ ಪಡೆದುಕೊಂಡಿದೆ. ಸುಮಾರು ಶತಮಾನಗಳ ಕಾಲದಿಂದ ಇಲ್ಲಿ ತಾಮ್ರದ ಗಣಿಗಾರಿಕೆ ನಡೆಯುತ್ತಿದೆ. ಆಫ್ರಿಕಾದ ತಾಮ್ರದ ಬೆಲ್ಟ್ನಲ್ಲಿರುವ ಕಾಂಗೋ ವಿಶ್ವದಲ್ಲಿರುವ ತಾಮ್ರದ ಶೇ.10ರಷ್ಟನ್ನು ಪೂರೈಕೆ ಮಾಡುತಿದೆ.