ಯಾದಗಿರಿ: ಕಟಾವಿಗೆ ಬಂದಿದ್ದ 4 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಪುತ್ರ ಎಂಬ ರೈತನಿಗೆ ಸೇರಿದ ಕಬ್ಬಿನ ಬೆಳೆಯಾಗಿದೆ. ಜಮೀನಿನಲ್ಲಿರುವ ಪಂಪ್ ಸೆಟ್ ನ ವಿದ್ಯುತ್ ವೈಯರ್ ನಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಈ ದುರ್ಘಟನೆ ನಡೆದಿದೆ.ಬೆಂಕಿ ನಂದಿಸಲು ಗ್ರಾಮಸ್ಥರಿಂದ ಹರಸಾಹಸ ಪಟ್ಟಿದ್ದಾರೆ. ಆದ್ರೆ ಬೆಂಕಿ ನಂದಿಸುವಷ್ಟರಲ್ಲಿ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದೆ.
ಇನ್ನೂ ಬೆಳೆ ಕಳೆದುಕೊಂಡು ಅನ್ನದಾತ ಶಿವಪುತ್ರಪ್ಪ ಕಂಗಲಾಗಿದ್ದು, ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.