ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ಗೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಮಧ್ಯಂತರ ಜಾಮೀನಲ್ಲಿರುವ ದರ್ಶನ್ ಖಾಯಂ ಬೇಲ್ ನಿರೀಕ್ಷೆಯಲ್ಲಿದ್ದಾರೆ.. ಆದ್ರೆ ಪೊಲೀಸರು ಕೊಲೆ ಕೇಸ್ಗೆ ಸಂಬಂಧಿಸಿದಂತೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಿಸೋಕ್ಕೆ ರೆಡಿಯಾಗಿದ್ದಾರೆ. ಈ ಚಾರ್ಜ್ಶೀಟ್ನಲ್ಲಿ ಮತ್ತೆರಡು ಫೋಟೋ ಸಾಕ್ಷಿಗಳನ್ನು ಸೇರಿಸಿದಂತೆ ಹಲವು ಪ್ರಮುಖ ಸಾಕ್ಷಿಗಳನ್ನು ಕೋರ್ಟ್ಗೆ ಸಲ್ಲಿಸಲಿದ್ದಾರೆ ಎನ್ನಲಾಗ್ತಿದೆ. ಈ ಕುರಿತ ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ .
ಈಗಾಗಲೇ ಮಧ್ಯಂತರ ಜಾಮೀನಿನ ಮೇಲೆ ಹೊರಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ನಟ ದರ್ಶನ್ ನ ಅರ್ಧದಷ್ಟು ಜಾಮೀನಿನ ಅವಧಿ ಕೂಡ ಮುಗಿಯುತ್ತಾ ಬಂದಿದೆ. ಈ ಮಧ್ಯೆ ರೆಗ್ಯುಲರ್ ಬೇಲ್ ಗೂ ಕೂಡ ಅರ್ಜಿ ಹಾಕಿಕೊಂಡಿದ್ದಾರೆ. ಆದ್ರೆ ದರ್ಶನ್ ಗೆ ಮತ್ತೊಂದು ಟೆನ್ಷನ್ ಶುರುವಾಗಿದೆ… ಅದಕ್ಕೆ ಕಾರಣ ಪೊಲೀಸರು ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಸಲ್ಲಿಸೋಕೆ ರೆಡಿಯಾಗಿರೋದು… ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ಪೊಲೀಸರು ನಾಳೆ ನ್ಯಾಯಾಲಯಕ್ಕೆ ಸಲ್ಲಿಕೆ ಸಾಧ್ಯತೆ ಇದೆ. 20ಕ್ಕೂ ಹೆಚ್ಚು ಸಾಕ್ಷಿಗಳು, ಹಲವು ಎಫ್ ಎಸ್ ಎಲ್ ವರದಿಗಳಿರುವ ಚಾರ್ಜ್ ಶೀಟ್ ನಲ್ಲಿ ಹಲವು ಸ್ಪೋಟಕ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಕೊಲೆ ನಡೆದ ಸ್ಥಳದಲ್ಲಿ ತೆಗೆದ ಫೋಟೋ ರಿಕವರಿ ಮಾಡಲಾಗಿದ್ದು. ಸ್ಥಳದಲ್ಲಿ ದರ್ಶನ್ ನಿಂತಿರುವ ಫೋಟೋ ಕೂಡ ಸಿಕ್ಕಿದೆ ಎನ್ನಲಾಗ್ತಿದೆ. ಪ್ರತ್ಯಕ್ಷದರ್ಶಿಗಳ ಮೊಬೈಲ್ನಿಂದ 2 ಫೋಟೋಗಳನ್ನು ರಿಕವರಿ ಮಾಡಲಾಗಿದೆ. ಈ ಫೋಟೋಗಳು ದರ್ಶನ್ಗೆ ದೊಡ್ಡ ಸಂಕಷ್ಟ ತಂದೊಡ್ಡಲಿದೆ.ರೇಣುಕಾಸ್ವಾಮಿ ಕೊಲೆ ನಡೆದಿದ್ದ ಸ್ಥಳದಲ್ಲಿ ದರ್ಶನ್ ಇದ್ದರು ಎಂಬುದನ್ನು ಈ 2 ಫೋಟೋಗಳು ಸಾಬೀತು ಮಾಡಲಿದೆ ಎನ್ನಲಾಗ್ತಿದೆ. ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ನಿಂತಿರುವ ಫೋಟೋವನ್ನು ಇದೀಗ ರೀಟ್ರಿವ್ ಮಾಡಲಾಗಿದೆ.
ದರ್ಶನ್ ಬೇಲ್ ಅರ್ಜಿ ವಿಚಾರಣೆ ನಡೆಯುತ್ತಿರುವ ಸಮಯದಲ್ಲೇ ಫೋಟೋ ಹೊರಬಂದಿದೆ.ಕೊಲೆ ನಡೆದ ಶೆಡ್ ನಲ್ಲಿ ತನ್ನ ಸಹಚರರ ಜೊತೆ ನಟ ದರ್ಶನ್ ನಿಂತಿರುವ ಫೋಟೋ ಇದ್ದಾಗಿದೆ. ಈ ವೇಳೆ ನಟ ದರ್ಶನ್ ಬ್ಲೂ ಟೀ ಶರ್ಟ್ ಹಾಗೂ ಬ್ಲ್ಯಾಕ್ ಕಲರ್ ಜೀನ್ಸ್ ಪ್ಯಾಂಟ್ ನಲ್ಲಿ ಇರೋ ಫೋಟೋ ರಿಕವರಿ ಮಾಡಲಾಗಿದೆ ಎನ್ನಲಾಗ್ತಿದೆ. ಈ ಘಟನೆ ಬಳಿಕ ಎರಡು ಫೋಟೋಗಳನ್ನು ಪುನೀತ್ ಡಿಲೀಟ್ ಮಾಡಿದ್ದ. ಪುನೀತ್ ಮೊಬೈಲ್ ಅನ್ನು ವಶಕ್ಕೆ ಪಡೆದ ಪೊಲೀಸರು ಎಫ್ ಎಸ್ ಎಲ್ ಗೆ ರವಾನೆ ಮಾಡಿದ್ರು. ಇದೀಗ ಪೊಲೀಸರು ಸಲ್ಲಿಸಿದ್ದ ಚಾರ್ಜ್ಶೀಟ್ನಲ್ಲಿ 2 ಫೋಟೋಗಳನ್ನು ಸೇರಿಸಿದ್ದಾರೆ ಎನ್ನಲಾಗ್ತಿದೆ.
ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಇಂದು ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಹೆಚ್ಚುವರಿ ಆರೋಪಪಟ್ಟಿ ವಿಚಾರಣಾ ಕೋರ್ಟ್ ಗೆ ಸಲ್ಲಿಸಲಾಗುವುದು ಎಂದು ಎಸ್ಪಿಪಿ ಹೈಕೋರಟ್ಗೆ ತಿಳಿಸಿದ್ರು.ಅರ್ಹತೆ ಮೇಲೆ ಮುಂದಿನ ದಿನಾಂಕದಂದು ವಿಚಾರಣೆ ನಡೆಸಬಹುದು ಆದ್ರೆ ವೈದ್ಯಕೀಯ ವರದಿಯ ಪ್ರತಿ ತಮಗೆ ನೀಡಿಲ್ಲ ಎಂದು ಎಸ್ ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಕ್ಕೆ ತಿಳಿಸಿದ್ರು.
ಮುಂದುವರೆದು 6 ವಾರಗಳ ಅವಧಿಗೆ ಷರತ್ತಿನ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ ಸರ್ಜರಿಯ ದಿನಾಂಕ ತಿಳಿಸಿಲ್ಲವೆಂದು ಎಸ್ ಪಿಪಿ ಪ್ರಸನ್ನಕುಮಾರ್ ವಾದಿಸಿದ್ರು. ಈ ನಡುವೆ ಹೈಕೋರ್ಟ್ ಗೆ ಮತ್ತೊಂದು ವೈದ್ಯಕೀಯ ವರದಿ ಸಲ್ಲಿಸಿದ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಎಸ್ ಪಿ ಪಿ ಗೂ ವೈದ್ಯಕೀಯ ವರದಿ ಪ್ರತಿಯನ್ನು ನೀಡಿದ್ರು.ಎಸ್ ಪಿ ಪಿ ಪ್ರಸನ್ನ ಕುಮಾರ್ ಗೆ ವರದಿ ಪರಿಶೀಲಿಸಿ ಪ್ರತಿಕ್ರಯಿಸಲು ಹೈಕೋರ್ಟ್ ಸೂಚನೆ ನೀಡಿ ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗಳನ್ನು ನವಂಬರ್ 26 ಕ್ಕೆ ವಿಚಾರಣೆ ನಿಗದಿಪಡಿಸಿದ ಹೈಕೋರ್ಟ್ ಮುಂದೂಡಿತು.
ರ್ಶನ್ ಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಮಾನವೀಯತೆ ಆಧಾರದ ಮೇಲೆ ಸರ್ಜರಿ ನಡೆಸಲೇಬೇಕು ಎನ್ನುವ ಚಿಕಿತ್ಸೆ ಹಿನ್ನಲೆ ಇಂಟ್ರೀಮ್ ಬೇಲ್ ಪಡೆದು ಕೊಂಡಿದ್ರು. ಆದ್ರೆ ದರ್ಶನ್ ಗೆ ಇನ್ನೂ ಶಸ್ತ್ರಚಿಕಿತ್ಸೆ ದಿನಾಂಕ ನಿಗದಿ ಮಾಡಿಲ್ಲ.ಶಸ್ತ್ರಚಿಕಿತ್ಸೆಗೆ ನಾವು ತಯಾರಿಯನ್ನು ನಡೆಸುತ್ತಾ ಇದ್ದೀವಿ ಎಂದು ರಿಪೋರ್ಟ್ ನಲ್ಲಿ ಉಲ್ಲೇಖಿಸಲಾಗಿದೆ.ಯಾವಾಗ ಸರ್ಜರಿ…? ಯಾವ ದಿನಾಂಕದಲ್ಲಿ ಸರ್ಜರಿ ಅನ್ನೋದು ಉಲ್ಲೇಖ ಮಾಡಿಲ್ಲ.ಇನ್ನೂ ಚಿಕಿತ್ಸೆಗೆ ತಯಾರಿ ನಡೆಸುತ್ತಾ ಇದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದು, ಆಸ್ಪತ್ರೆಯಲ್ಲಿ ಇರುವ ದರ್ಶನ್ ಗೆ ಶಸ್ತ್ರಚಿಕಿತ್ಸೆ ದಿನಾಂಕ ನಿಗದಿ ಅನ್ನೋದು ಪಕ್ಕಾ ಆಗಿದ್ದು. ಸರ್ಜರಿ ಉದ್ದೇಶದಿಂದಲೇ ಜೈಲಿನಿಂದ ಇಂಟ್ರೀಮ್ ಬೇಲ್ ಪಡೆದು ಬಂದ ದರ್ಶನ್ ರೆಗ್ಯೂಲರ್ ಬೇಲ್ ಅರ್ಜಿಯ ಮುಂದಿನ ದಿನಗಳಲ್ಲಿ ನಡೆಯುವ ವಿಚಾರಣೆ ಪ್ರಕ್ರಿಯೆ ಕುತೂಹಲ ಮೂಡಿಸಿದೆ.