ಮೈಸೂರು: ಮುಡಾ ಅಕ್ರಮದಲ್ಲಿ ಸಿಎಂ ಹಾದಿಯಾಗಿ ಪ್ರಭಾವಿ ರಾಜಕಾರಣಿಗಳ ಹೆಸರು ಕೇಳಿ ಬಂದಿದೆ, ಈಗಾಗಿ ಮುಡಾದಲ್ಲಿ ಕಡತಗಳನ್ನ ನಾಶಪಡಿಸಲಾಗಿದೆ ಎಂದು ದೂರದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ನಾನು ಮುಡಾ ಅಕ್ರಮ ಬಗ್ಗೆ ದೂರು ನೀಡುವ ಮುನ್ನವೇ ಲೋಕಾಯುಕ್ತ ಅಧಿಕಾರಿಗಳು ಮುಡಾ ಅಕ್ರಮ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು. ಮುಡಾ ಮೇಲೆ ದಾಳಿ ಮಾಡಿ ದಾಖಲೆ ವಶಪಡಿಸಿಕೊಳ್ಳಲಿಕ್ಕೆ ಮುಂದಾಗಿದ್ರು. ಹಿಂದಿನ ಲೋಕಾಯುಕ್ತ ಅಧಿಕಾರಿ ಸಜಿತ್ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಗೆ ಇದರ ಮಾಹಿತಿ ನೀಡುತ್ತಾರೆ.
ಆಗ ಭೈರತಿ ಸುರೇಶ್ ರವರು ಮುಡಾದಲ್ಲಿನ ಕಡತಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಈಡಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ. ಮುಡಾ ದಲ್ಲಿನ ಕಡತ ನಾಪತ್ತೆ ಮಾಡಿರೋ ಅಧಿಕಾರಿಗಳು, ಜನಪ್ರತಿನಿದಿನಗಳ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಆಗ್ರಹಿಸಿದರು.