ಬೆಂಗಳೂರು: ಪ್ರತಿ ಮನೆಗಳಿಗೂ ಬಿಪಿ ಹಾಗೂ ಶುಗರ್ ಚೆಕ್ ಮಾಡಿಕೊಳ್ಳುವ ಕಿಟ್ ವಿತರಣೆ ಮಾಡುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮನುಷ್ಯರಿಗೆ ಸಕ್ಕರೆ ಕಾಯಿಲೆ ಹಾಗೂ ಬಿಪಿ ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿದ್ದು,
ಅವುಗಳನ್ನು ನಿತ್ಯವೂ ಸರಿಯಾಗಿ ಎದುರಿಸಿದರೆ ಮಾತ್ರ ನೆಮ್ಮದಿಯಾಗಿ ಜೀವನ ನಡೆಸಬಹುದು ಅಥವಾ ವೃದ್ಧಾಪ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗದು. ಅದಕ್ಕಾಗಿ, ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರತಿ ಮನೆಗೆ ಬಿಪಿ ಹಾಗೂ ಶುಗರ್ ಚೆಕ್ ಮಾಡಿಕೊಳ್ಳುವ ಕಿಟ್ ವಿತರಣೆ ಮಾಡುವುದಾಗಿ ಹೇಳಿದರು.
ಇನ್ನೂ ರಾಜ್ಯದ 5 ಸಾವಿರ ಆರೋಗ್ಯ ಕೇಂದ್ರಗಳಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆಯ ಯೋಜನೆಯನ್ನು ಅನುಷ್ಠಾನ ಮಾಡಲು ಸಿದ್ಧತೆ ಮಾಡಲಾಗಿದೆ. ಆರೋಗ್ಯ ಇಲಾಖೆ ವ್ಯಾಪ್ತಿ ದೊಡ್ಡದಿದ್ದು, ಸಿಬ್ಬಂದಿ ಕೊರತೆ, ವೇತನ ಹೆಚ್ಚಳ ಹಾಗೂ ನಿರ್ವಹಣೆ ಮಾಡಲು ಎಲ್ಲರ ಸಹಕಾರ ಅಗತ್ಯವಿದೆ. ಮಾಯಕೊಂಡ ಗ್ರಾಮಕ್ಕೆ ಸಮುದಾಯ ಆಸ್ಪತ್ರೆ ಮಂಜೂರು ಮಾಡುವುದಾಗಿ’ ಭರವಸೆ ನೀಡಿದರು.